ರಾಯಚೂರು: ನಾಗರ ಪಂಚಮಿಯಂದು ರಿಮ್ಸ್ ಆಸ್ಪತ್ರೆಯಲ್ಲಿ ನಾಗರಹಾವು ಪ್ರತ್ಯಕ್ಷ - ವಿಡಿಯೋ - Rims Hospital Raichur
ರಾಯಚೂರು: ನಾಗರ ಪಂಚಮಿಯಂದು ನಾಗರಹಾವೊಂದು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಪ್ರತ್ಯಕ್ಷವಾಗಿದೆ. ರಿಮ್ಸ್ ಆಸ್ಪತ್ರೆಯಲ್ಲಿನ ತುರ್ತು ನಿಗಾ ಘಟಕದ ಹವಾನಿಯಂತ್ರಕದಲ್ಲಿ ನಾಗರಹಾವು ಕಂಡು ಬಂದಿದ್ದು, ಎಸಿಯನ್ನು ತೆಗೆದು ನೋಡಿದಾಗ ಹಾವು ಪತ್ತೆಯಾಗಿದೆ. ಕೂಡಲೇ ನಾಗರಹಾವು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಹಾವನ್ನು ಹಿಡಿದ ಬಳಿಕ ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.
Last Updated : Feb 3, 2023, 8:25 PM IST