ಹುಲ್ಲಿನ ಬಣವೆಯಲ್ಲಿದ್ದ ನಾಗರಹಾವು ಸೆರೆ- ವಿಡಿಯೋ - ಉರಗ ತಜ್ಞ ಬಸವರಾಜ ಹೊಸಕೇರಿ
ಗಂಗಾವತಿ: ಹೊಲದಲ್ಲಿ ಬೀಡುಬಿಟ್ಟು ಆತಂಕ ಸೃಷ್ಟಿಸಿದ್ದ ಬೃಹತ್ ಗಾತ್ರದ ನಾಗರಹಾವನ್ನು ಉರಗ ತಜ್ಞರು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿರುವ ಘಟನೆ ಕನಕಗಿರಿ ತಾಲೂಕಿನ ಬೆನಕನಾಳ ಗ್ರಾಮದಲ್ಲಿ ನಡೆದಿದೆ. ಯಂಕಪ್ಪ ಎಂಬುವರ ಹೊಲದಲ್ಲಿದ್ದ ಹುಲ್ಲಿನ ಬಣವೆಯಲ್ಲಿ ಸುಮಾರು 8 ಅಡಿ ಉದ್ದದ ಹಾವು ಇರುವುದು ಕಂಡುಬಂದಿತ್ತು. ಕೂಡಲೇ ಗ್ರಾಮದ ಉರಗ ತಜ್ಞ ಬಸವರಾಜ ಹೊಸಕೇರಿ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅವರು ಹಾವಿಗೆ ಯಾವುದೇ ತೊಂದರೆಯಾಗದಂತೆ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಹಾವುಗಳು ತಂಪು ಪ್ರದೇಶಗಳನ್ನು ಅರಸಿ ಬರುತ್ತಿವೆ.