ಸಮುದ್ರದಲ್ಲಿ ಹೃದಯಾಘಾತಕ್ಕೀಡಾದ ವಿದೇಶಿ ನೌಕೆಯ ನಾವಿಕನ ರಕ್ಷಿಸಿದ ಭಾರತದ ಕೋಸ್ಟ್ಗಾರ್ಡ್: ವಿಡಿಯೋ - ವಿದೇಶಿ ನೌಕೆಯ ನಾವಿಕನ ರಕ್ಷಿಸಿದ ಭಾರತದ ಕೋಸ್ಟ್ಗಾರ್ಡ್
ಪೋರಬಂದರ್(ಗುಜರಾತ್):ಸಮುದ್ರ ಪ್ರಯಾಣದ ವೇಳೆ ಹೃದಯಾಘಾತಕ್ಕೀಡಾಗಿದ್ದ ವಿದೇಶಿ ಹಡಗಿನ ಕ್ಯಾಪ್ಟನ್ ಒಬ್ಬರನ್ನು ಪೋರಬಂದರ್ ಕೋಸ್ಟ್ ಗಾರ್ಡ್ ಪಡೆ ಕೆಟ್ಟ ಹವಾಮಾನದ ಮಧ್ಯೆಯೂ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಪೋರಬಂದರ್ನಿಂದ 90 ನಾಟಿಕಲ್ ಮೈಲು(166 ಕಿಮೀ) ದೂರದಲ್ಲಿದ್ದ ವಿದೇಶಿ ಹಡಗನ್ನು ವ್ಯತಿರಿಕ್ತ ಹವಾಮಾನ ಮಧ್ಯೆಯೂ ತಲುಪಿ ಅಲ್ಲಿಂದಲೇ ಟೇಕಾಫ್ ಮಾಡಲಾಗಿದೆ.
ಮುದ್ರಾದಿಂದ ಮಾಲ್ಡೀವಿಯನ್ ಗ್ಯಾಸ್ ಹೊತ್ತೊಯ್ಯುತ್ತಿದ್ದ ವೇಳೆ ವಿದೇಶಿ ಹಡಗಿನ ಕ್ಯಾಪ್ಟನ್ಗೆ ಹೃದಯಾಘಾತವಾಗಿದೆ. ಹಡಗಿನ ಸಿಬ್ಬಂದಿ ಭಾರತದ ಪೋರಬಂದರ್ಗೆ ಮಾಹಿತಿ ನೀಡಿದೆ. ವಿಷಯ ತಿಳಿದ ತಕ್ಷಣ ಕೆಟ್ಟ ಹವಾಮಾನವನ್ನೂ ಲೆಕ್ಕಿಸದೇ 166 ಕಿಮೀ ದೂರದಲ್ಲಿ ಸಮುದ್ರದ ಮಧ್ಯೆ ಇದ್ದ ಹಡಗಿನಲ್ಲಿಗೇ ವಿಮಾನವನ್ನು ಹಾರಿಸಲಾಗಿದೆ.
ತೀವ್ರ ಗಾಳಿ ಮತ್ತು ಸಮುದ್ರದ ಉಬ್ಬರದ ನಡುವೆಯೇ ಕ್ಯಾಪ್ಟನ್ರನ್ನು ಏರ್ಲಿಫ್ಟ್ ಮಾಡಿ, ಪೋರಬಂದರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಅಲ್ಲಿಂದ ರಾಜ್ಕೋಟ್ಗೆ ಸಾಗಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದ್ದು, ಕ್ಯಾಪ್ಟನ್ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.