ಬೀದರ್: ಮಗನ ಗೆಲುವಿಗೆ ದರ್ಗಾದಲ್ಲಿ ಕಣ್ಣೀರು ಹಾಕಿದ ಸಿ ಎಂ ಇಬ್ರಾಹಿಂ - etv bharat karnataka
ಬೀದರ್: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಚಿಟ್ಟಗುಪ್ಪ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುವ ವೇಳೆ ತನ್ನ ಮಗನನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿಕೊಡು ಎಂದು ಕಣ್ಣೀರು ಹಾಕಿದ್ದಾರೆ. ಸಿ ಎಂ ಇಬ್ರಾಹಿಂ ಅವರ ಪುತ್ರ ಫಯಾಜ್ ಇಬ್ರಾಹಿಂ ಅವರಿಗೆ ಹುಮನಾಬಾದ್ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆಯಂತೆ. ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಮತದಾರರು ಇದ್ದು, ಜೆಡಿಎಸ್ಗೆ ಗೆಲುವು ನಿಶ್ಚಿತ ಎಂಬುದು ಇಬ್ರಾಹಿಂ ಅವರ ನಿರೀಕ್ಷೆಯಾಗಿದೆ.
ಇದನ್ನೂ ಓದಿ:ಅಲ್ಲಾ ಮತ್ತು ಓಂ ಒಂದೇ ಎಂದ ಮದನಿ: ಧಾರ್ಮಿಕ ಮುಖಂಡರ ಅಸಮಾಧಾನ