ದಲಿತ ಮುಖಂಡನ ಮನೇಲಿ ಚಹಾ ಕುಡಿದ ಸಿಎಂ, ಮಾಜಿ ಸಿಎಂ - cm bommai bsy drink tea in dalit mukhand house
ರಾಯಚೂರು ತಾಲೂಕಿನ ಗಿಲ್ಲೆಸೂಗೂರು ಗ್ರಾಮದಲ್ಲಿ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಭಾಗವಹಿಸಲು ಆಗಮಿಸಿದ್ದ ವೇಳೆ ದಲಿತ ಮುಖಂಡ ಅಯ್ಯಪ್ಪ ಮನೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಚಹಾ ಕುಡಿದರು. ಇದಾದ ಬಳಿಕ ಕುಟುಂಬದ ಜೊತೆಗೆ ಸಮಾಲೋಚನೆ ನಡೆಸಿದರು. ದಲಿತ ಮನೆಯಲ್ಲಿ ಊಟ ಮಾಡುವ ಸಲುವಾಗಿ ಸಿಎಂ ಹಾಗೂ ಮಾಜಿ ಸಿಎಂಗಾಗಿ ಕುಟುಂಬಸ್ಥರು ತರಾವರಿ ಅಡುಗೆ ತಯಾರಿಸಿ ಕಾದು ಕುಳಿತ್ತಿದ್ದರು. ಆದರೆ ಮಂತ್ರಾಲಯದಲ್ಲೇ ಊಟ ಮಾಡಿದ್ದರಿಂದ ಇಲ್ಲಿಗೆ ಬಂದಾಗ ಚಹಾ ಸೇವಿಸಿದರು. ಈ ವೇಳೆ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕರಾದ ರಾಜು ಗೌಡ ಸೇರಿದಂತೆ ಅನೇಕರು ಇದ್ದರು.
Last Updated : Feb 3, 2023, 8:29 PM IST