ಚೆಕ್‌ಪೋಸ್ಟ್‌ನಲ್ಲಿ ಚುನಾವಣಾ ಸಿಬ್ಬಂದಿಯಿಂದ ಸಿಎಂ ಕಾರು ತಪಾಸಣೆ- ವಿಡಿಯೋ - ಕರ್ನಾಟಕ ವಿಧಾನಸಭೆ ಚುನಾವಣೆ
ವಿಜಯನಗರ:ಹೊಸಪೇಟೆ ತಾಲೂಕಿನ ಭುವನಹಳ್ಳಿ ಸಮೀಪ ಆರಂಭಿಸಿರುವ ಚೆಕ್‌ಪೋಸ್ಟ್‌ನಲ್ಲಿಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರು ತಡೆದ ಚುನಾವಣಾ ಸಿಬ್ಬಂದಿ ತಪಾಸಣೆ ನಡೆಸಿದರು. ಬಳ್ಳಾರಿ ತಾಲೂಕಿನ ತೋರಣಗಲ್ಲು ವಿಮಾನ ನಿಲ್ದಾಣದಿಂದ ಹೊಸಪೇಟೆ ಗಾದಿಗನೂರು ಮಾರ್ಗವಾಗಿ ತೆರಳುತ್ತಿದ್ದ ಸಿಎಂ ಕಾರು, ಚೆಕ್‌ಪೊಸ್ಟ್ ಬಳಿ ಬರುತ್ತಿದ್ದಂತೆ ವಿಜಯನಗರ ವಿಧಾನಸಭೆ ಚುನಾವಣಾ ಅಧಿಕಾರಿ ಸಿದ್ದರಾಮೇಶ್ವರ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿ ಕಾರಿನ ಡಿಕ್ಕಿ ಹಾಗೂ ಒಳಗೆ ಪರಿಶೀಲಿಸಿದರು.
ಇದನ್ನೂಓದಿ:'ಬಿಜೆಪಿ ಬಿಟ್ಟು ಹೋಗಿ ದೊಡ್ಡವರಾದ ಉದಾಹರಣೆ ಇಲ್ಲ': ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ
ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿಸಲು ಆಗಮಿಸಿದ ಸಿಎಂ ತಪಾಸಣೆಗೆ ಸಹಕರಿಸಿದರು. ಸಿಎಂ ವಾಹನದಲ್ಲಿ ಆನಂದ್ ಸಿಂಗ್ ಸಹ ಇದ್ದರು. ಡಿಕ್ಕಿಯಲ್ಲಿ ಟ್ರಾವೆಲ್ ಬ್ಯಾಗ್ ಹಾಗೂ ಕೇವಲ ನೀರಿನ ಬಾಟಲ್‌ಗಳಷ್ಟೇ ಕಂಡುಬಂತು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ರಾಜ್ಯ ಚುನಾವಣಾ ಆಯೋಗ ರಾಜ್ಯದೆಲ್ಲೆಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದು, ವಾಹನಗಳನ್ನು ಕೂಲಂಕಷವಾಗಿ ತಪಾಸಣೆ ಮಾಡಿಯೇ ಬಿಡಲಾಗುತ್ತಿದೆ. ಇದಕ್ಕಾಗಿ ಸಿಬ್ಬಂದಿ ಅಹರ್ನಿಶಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂಓದಿ:ಶಾಮನೂರು ಶಿವಶಂಕರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಜಗದೀಶ್ ಶೆಟ್ಟರ್