ಹಿಮಾಚಲದಲ್ಲಿ ಮೇಘಸ್ಫೋಟ : ಉತ್ತರಾಖಂಡ್ ನಲ್ಲಿ ಭೂಕುಸಿತ : ರಸ್ತೆ, ಸೇತುವೆ ಸಂಚಾರ ಬಂದ್ - ಹಿಮಾಚಲ ಪ್ರದೇಶ
ಖಂಡ್ವಾ (ಹಿಮಾಚಲ ಪ್ರದೇಶ): ಇಲ್ಲಿನ ಚಂಬಾ ಜಿಲ್ಲೆಯ ಖಂಡ್ವಾ ಗ್ರಾಮದಲ್ಲಿ ಮೇಘ ಸ್ಫೋಟ ಉಂಟಾಗಿ ಕೆಲವು ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿವೆ. ಈಗಾಗಲೇ ಭಾರಿ ಮಳೆಗೆ ಜನರ ಬದುಕು ದುಸ್ತರವಾಗಿದ್ದು, ಮತ್ತೆ ಮೇಘಸ್ಫೋಟದಿಂದ ನಿವಾಸಿಗಳು ಪರದಾಡುವಂತಾಗಿದೆ. ಮನೆಗಳಿಗೆ ನೀರು ನುಗ್ಗಿದ್ದಲ್ಲದೆ, ವಾಹನ ಸಂಚಾರ ವ್ಯತ್ಯಯವಾಗಿದೆ. ಹಾಗೆಯೇ ಉತ್ತರಾಖಂಡ್ದ ರುದ್ರಪ್ರಯಾಗ ಜಿಲ್ಲೆಯ ಚೋಪ್ಟಾ-ತಡಾಗ್ ಮಾರ್ಗದಲ್ಲಿ ಭೀಕರ ಭೂಕುಸಿತ ಸಂಭವಿಸಿ ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿವೆ. ಮಳೆಯಿಂದ ಭೂಕುಸಿತವಾಗಿದ್ದು, ಹೆದ್ದಾರಿ ಸಂಚಾರವೂ ಸ್ಥಗಿತಗೊಂಡಿದೆ.
Last Updated : Feb 3, 2023, 8:26 PM IST