ಬಾಗಲಕೋಟೆ: ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮಾತಿನ ಚಕಮಕಿ
ಬಾಗಲಕೋಟೆ: ನಗರಸಭೆ ಸಾಮಾನ್ಯ ಸಭೆಯಲ್ಲಿಂದು ಪಾಕಿಸ್ತಾನದ ಹೆಸರು ಬಳಕೆ ಮಾಡಿದ್ದು ಸದಸ್ಯರ ವಾಗ್ವಾದಕ್ಕೆ ಕಾರಣವಾಯಿತು. ಕಾಂಗ್ರೆಸ್ ಸದಸ್ಯ ಹಾಜಿಸಾಬ ದಂಡಿನ ಅವರು ಮಾತನಾಡಿ, ತಮ್ಮ ವಾರ್ಡ್‌ನಲ್ಲಿ ಅಭಿವೃದ್ದಿ ಕೆಲಸಗಳಾಗುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಉಪಾಧ್ಯಕ್ಷ ಬಸವರಾಜ ಅವರಾದಿ ಪ್ರತಿಕ್ರಿಯಿಸಿ, ನಿಮ್ಮ ವಾರ್ಡ್ ಪಾಕಿಸ್ತಾನದಲ್ಲಿಯೇ ಎಂದು ಪ್ರಶ್ನಿಸಿದರು. ಆದ ದಂಡಿನ, ಪಾಕಿಸ್ತಾನದ ಹೆಸರು ಇಲ್ಲೇಕೆ ಬಳಕೆ ಮಾಡುತ್ತಿದ್ದೀರಿ?, ಅದರ ಅವಶ್ಯಕತೆ ಏನಿತ್ತು? ಎಂದರು.
ಬಾಗಲಕೋಟೆ ನಗರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಿವೆ. ಹಾಗಾಗಿ, ಅಭಿವೃದ್ದಿ ಆಗಿಲ್ಲ ಎಂದಿದ್ದಕ್ಕೆ ಪಾಕಿಸ್ತಾನದ ಹೆಸರು ಹೇಳಬೇಕಾಯಿತು ಎಂದು ಅವರಾದಿ ಸ್ಪಷ್ಟನೆ ಕೊಟ್ಟರು. ಇಬ್ಬರ ನಡುವಿನ ಮಾತಿನ ಚಕಮಕಿ ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತವೂ ತಲುಪಿತು. ಶಾಸಕ ವೀರಣ್ಣ ಚರಂತಿ ಮಠ ಮಧ್ಯಪ್ರವೇಶಿಸಿ, ನಮ್ಮ ಭಾಗದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿವೆ. ನೀವು ಕೇಳುವ ರೀತಿ ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ:ಅವರಷ್ಟು ಸಾಮರ್ಥ್ಯವಿಲ್ಲ: ಹೆಚ್ಡಿಕೆ ಟ್ವೀಟ್ಗೆ ಸಿ ಟಿ ರವಿ ಟಾಂಗ್