ಗುಜ್ಜರ್ - ರಜಪೂತ್ ಸಮುದಾಯದ ನಡುವೆ ಘರ್ಷಣೆ.. ವಿಡಿಯೋ ನೋಡಿ! - sahranapur
ಸಹರಾನ್ಪುರ್ (ಮಧ್ಯಪ್ರದೇಶ):ಸಾಮ್ರಾಟ್ ಮಿಹಿರ್ ಬೋಜ್ ಯಾತ್ರೆಯಲ್ಲಿ ಗುರ್ಜರ್ ಮತ್ತು ರಜಪೂತ್ ಸಮುದಾಯಗಳು ಪರಸ್ಪರ ಮುಖಾಮುಖಿಯಾಗಿ ಮಧ್ಯಪ್ರದೇಶದ ಸಹರಾನ್ಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಮತ್ತು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಗುರ್ಜರ್ ಸಮುದಾಯದವರು ಸಾಮ್ರಾಟ್ ಮಿಹಿರ್ ಬೋಜ್ ಯಾತ್ರೆಯನ್ನು ಜಿಲ್ಲಾಡಳಿತ ಅನುಮತಿ ಇಲ್ಲದೇ ಕೈಕೊಂಡಿದ್ದರು. ಈ ಯಾತ್ರೆಗೆ ರಜಪೂತ ಸಮಾಜದವರು ವಿರೋಧ ವ್ಯಕ್ತಪಡಿಸಿದ್ದರು. ಇಂದು ಯಾತ್ರೆ ಸಮಯದಲ್ಲಿ ಎರಡು ಸಮುದಾಯಗಳು ಪರಸ್ಪರ ಮುಖಾಮುಖಿಯಾಗಿ ಗಲಾಟೆ ಉಂಟಾಗುವಷ್ಟರಲ್ಲಿ ಪೊಲೀಸರು ಎರಡು ಸಮುದಾಯದವರನ್ನು ನಿಯಂತ್ರಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸಹರಾನ್ಪುರ್ನಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ.
ಯಾತ್ರೆಗೂ ಮುನ್ನ ರಜಪೂತ ಸಮುದಾಯದ ಸದಸ್ಯರು ಹಕೀಕತ್ ನಗರದ ರಾಮಲೀಲಾ ಮೈದಾನದಲ್ಲಿ ಧರಣಿ ನಡೆಸಿ, ಗುರ್ಜರ್ ಸಮುದಾಯದವರು ನಡೆಸುತ್ತಿರುವ ಯಾತ್ರೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿ ಕಾನೂನು ಉಲ್ಲಂಘಿಸಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದರು.
ಸಂಘರ್ಷಕ್ಕೆ ಕಾರಣ:ಸಾಮ್ರಾಟ್ ಮಿಹಿರ್ ಬೋಜ್ ಒಬ್ಬ ರಾಜನಾಗಿದ್ದು, ಗುರ್ಜರ್ ಮತ್ತು ರಜಪೂತ್ ಸಮುದಾಯಗಳು ಸಾಮ್ರಾಟ್ ಮಿಹಿರ್ ಬೋಜ್ ನಮ್ಮ ಸಮುದಾಯಕ್ಕೆ ಸೇರಿದ್ದವರೆಂದು ಪರಸ್ಪರ ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ಸಿಡಿಲು ಬಡಿದು ಮಹಿಳೆ ಸಾವು... ತೆಂಗಿನ ಮರ ಬಿದ್ದು ಎರಡು ಕಾರು ಜಖಂ