ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವೆ ಗಲಾಟೆ: ವಿಡಿಯೋ - ಗಲಾಟೆ
ನಳಂದ (ಬಿಹಾರ): ನಳಂದ ಜಿಲ್ಲೆಯ ಪಟೇಲ್ ನಗರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದೆ. ಈ ವೇಳೆ, ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ’’ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. ನಾವು ವಿಷಯವನ್ನು ಪರಿಶೀಲಿಸುತ್ತಿದ್ದೇವೆ. ಪ್ರಸ್ತುತ ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ಮತದಾನ ಶಾಂತಿಯುತವಾಗಿ ನಡೆಯುತ್ತಿದೆ‘‘ ಎಂದು ಎಸ್ಪಿ ಅಶೋಕ್ ಮಿಶ್ರಾ ತಿಳಿಸಿದ್ದಾರೆ. ನಾವು ಘಟನಾ ಸ್ಥಳವನ್ನು ತಲುಪಿದ್ದೇವೆ. ಪರಿಸ್ಥಿತಿಯನ್ನು ನಿಯಂತ್ರಿಸಿದ್ದೇವೆ. ಶಾಂತಿಯುತವಾಗಿ ಮತದಾನ ನಡೆಯುತ್ತಿದೆ ಎಂದು ಡಿಎಸ್ಪಿ ಸದರ್ ಹೇಳಿದ್ದಾರೆ.
Last Updated : Feb 3, 2023, 8:37 PM IST