ತಾಜಿಯಾ ಮೆರವಣಿಗೆ ವೇಳೆ ಪೊಲೀಸರು, ಜನರ ನಡುವೆ ಗಲಾಟೆ, ಕಲ್ಲು ತೂರಾಟ: ವಿಡಿಯೋ - ರಾಷ್ಟ್ರ ರಾಜಧಾನಿ ನವದೆಹಲಿ
ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿಯ ನಂಗ್ಲೋಯ್ ಪ್ರದೇಶದಲ್ಲಿ ಮೊಹರಂ ಪ್ರಯುಕ್ತ ತಾಜಿಯಾ ಮೆರವಣಿಗೆ ವೇಳೆ ಗದ್ದಲ ಉಂಟಾಯಿತು. ಮೊಹರಂ ಪ್ರಯುಕ್ತ ತಾಜಿಯಾವನ್ನು ಹೊರ ತೆಗೆಯುವ ವೇಳೆ ಗಲಾಟೆಯುಂಟಾಗಿ ಮೆರವಣಿಗೆಯಲ್ಲಿ ತೊಡಗಿದ್ದ ಜನರ ಮೇಲೆ ಕಲ್ಲು ತೂರಾಟ ನಡೆಯಿತು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಮೆರವಣಿಗೆಯಲ್ಲಿ ತೊಡಗಿದ್ದ ಜನರು ತಾಜಿಯಾವನ್ನು ಸೂರಜ್ಮಲ್ ಕ್ರೀಡಾಂಗಣದೊಳಗೆ ಕರೆದೊಯ್ಯಲು ತೀರ್ಮಾನಿಸಿದ್ದರು. ಆದರೆ ಕ್ರೀಡಾಂಗಣದ ಗೇಟ್ ಮುಚ್ಚಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಮೆರವಣಿಗೆಯಲ್ಲಿ ತೊಡಗಿದ್ದ ಜನರನ್ನು ಒಳಗೆ ಬಿಡಲು ಪೊಲೀಸರು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಜನರು ಕಲ್ಲು ತೂರಾಟ ನಡೆಸಿದರು.
ವಿಷಯ ತಿಳಿಯುತ್ತಿದ್ದಂತೆ ವಿವಿಧ ಠಾಣೆಗಳ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಚ್ ಕೂಡ ಮಾಡಬೇಕಾಯಿತು. ಇದೇ ವೇಳೆ ಗ್ಲೋಯ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರ ವಾಹನಕ್ಕೂ ಹಾನಿಗಳಾಗಿವೆ. ಜೊತೆಗೆ ಎಸ್‌ಎಚ್‌ಒ ಕೂಡ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಹಾಗೂ ಇತರ ಉನ್ನತ ಅಧಿಕಾರಿಗಳು ಆಗಮಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಇದನ್ನೂ ಓದಿ:ಸಂಭ್ರಮದಿಂದ ಮೊಹರಂ ಹಬ್ಬ ಆಚರಣೆ: ಹುಲಿ ವೇಷ ತೊಟ್ಟು ಕುಣಿದು ಹರಕೆ ತೀರಿಸಿದ ಭಕ್ತರು...