ಕರ್ನಾಟಕ

karnataka

ಜೆಸ್ಕಾಂ ಸಿಬ್ಬಂದಿ ಜೊತೆ ಗ್ರಾಮಸ್ಥರ ಗಲಾಟೆ

ETV Bharat / videos

'ನಾವು ಕರೆಂಟ್‌ ಬಿಲ್ ಕಟ್ಟಲ್ಲ..': ಜೆಸ್ಕಾಂ ಸಿಬ್ಬಂದಿ- ಗ್ರಾಮಸ್ಥರ ವಾಗ್ವಾದ

By

Published : May 28, 2023, 4:09 PM IST

ಯಾದಗಿರಿ :ವಿದ್ಯುತ್ ಬಿಲ್ ಪಾವತಿ ಬಾಕಿ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಜೆಸ್ಕಾಂ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಯಾದಗಿರಿಯ ಅಬ್ಬೆತುಮಕೂರು ಗ್ರಾಮದಲ್ಲಿ ಇಂದು ನಡೆಯಿತು. ಕಾಂಗ್ರೆಸ್‌ನವರು ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಹೇಳಿದ್ದಾರೆ. ಅದಕ್ಕೆ ನಾವು ಯಾರೂ ಬಿಲ್ ಕಟ್ಟುವುದಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಅಬ್ಬೆತುಮಕೂರು ಗ್ರಾಮದಲ್ಲಿ 6 ರಿಂದ 7 ಕುಟುಂಬಸ್ಥರು ಸುಮಾರು 5 ರಿಂದ 10 ಸಾವಿರ ರು.ಯಷ್ಟು ವಿದ್ಯುತ್ ಬಿಲ್ ಬಾಕಿ ಇಟ್ಟುಕೊಂಡಿದ್ದಾರೆ. ಬಾಕಿ ಇರುವ ಬಿಲ್ ಕಟ್ಟಲು ಗ್ರಾಮಸ್ಥರು ಹಿಂದೇಟು ಹಾಕಿದ್ದು ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸಲಕರಣೆಗಳನ್ನು ತಮ್ಮ ವಾಹನಕ್ಕೆ ತುಂಬಿಸುತ್ತಿದ್ದರು. ಇದನ್ನು ಗಮನಿಸಿದ ಮಹಿಳೆಯರು ಸ್ಥಳದಲ್ಲಿಯೇ ವಾಗ್ವಾದ ಮಾಡಿದ್ದಾರೆ.    

ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಉಚಿತವಾಗಿ ಐದು ಗ್ಯಾರಂಟಿಗಳನ್ನು ಜನರಿಗೆ ನೀಡುವುದಾಗಿ ಪ್ರಣಾಳಿಕೆಯಲ್ಲಿ​ ಘೋಷಣೆ ಮಾಡಿತ್ತು. ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್​ನಲ್ಲೇ ಗ್ಯಾರಂಟಿಗಳನ್ನು ಈಡೇರಿಸುವುದಾಗಿಯು ಹೇಳಿತ್ತು. ಈ ಪೈಕಿ ಪ್ರತಿ ಮನೆಗೆ 200 ಯೂನಿಟ್​ ಕರೆಂಟ್​ ಫ್ರೀ ಎಂಬುದು ಮಹತ್ವದ್ದಾಗಿದೆ. ಹೀಗಾಗಿ, ರಾಜ್ಯದೆಲ್ಲದೆ ಜನರು ವಿದ್ಯುತ್ ಬಿಲ್​ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.    

ಇದನ್ನೂ ಓದಿ :'ಕರೆಂಟ್ ಬಿಲ್ ಕಟ್ಟಂಗಿಲ್ಲ' ಎಂದು ತಮಟೆ ಬಾರಿಸಿದ ವ್ಯಕ್ತಿ: ವಿಡಿಯೋ ವೈರಲ್​

ABOUT THE AUTHOR

...view details