ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ... ನಾಲ್ವರ ಬಂಧನ
ಚಿಕ್ಕಮಗಳೂರು: ಕ್ಷುಲಕ್ಕ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರ ನಡುವೆಯೇ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಅರವಿಂದ ನಗರದಲ್ಲಿ ನಡೆದಿದೆ. ದುರ್ಗಿ ಬಿಡುವ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಘಟನೆಯಲ್ಲಿ ಸುದರ್ಶನ್ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಸುದರ್ಶನ್ ಬಸವನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ದೂರಿನ ಮೆರೆಗೆ ಪೊಲೀಸರು ಸತೀಶ್, ಪ್ರಶಾಂತ, ಧನು, ಚಂದು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಜಗಳದಲ್ಲಿ ಶಾಸಕ ಸಿ.ಟಿ ರವಿ ಅವರ ಬ್ಯಾನರ್ ಹರಿದು ಹೋಗಿದೆ.
Last Updated : Feb 3, 2023, 8:29 PM IST