ಸುಪ್ರೀಂ ಕೋರ್ಟ್ ಆವರಣದಲ್ಲಿ ವಿಶೇಷಚೇತನರಿಂದಲೇ ನಡೆಸಲ್ಪಡುವ 'ಮಿಟ್ಟಿ ಕೆಫೆ' ಉದ್ಘಾಟಿಸಿದ ಸಿಜೆಐ: ವಿಡಿಯೋ - ಸುಪ್ರೀಂ ಕೋರ್ಟ್ ಆವರಣದಲ್ಲಿ ಮಿಟ್ಟಿ ಕೆಫೆ
Published : Nov 10, 2023, 1:00 PM IST
ನವದೆಹಲಿ: ಸುಪ್ರೀಂ ಕೋರ್ಟ್ ಆವರಣದಲ್ಲಿ 'ಮಿಟ್ಟಿ ಕೆಫೆ'ಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಇಂದು ಉದ್ಘಾಟಿಸಿದರು. ಇದು ಸಂಪೂರ್ಣವಾಗಿ ವಿಶೇಷಚೇತನ ಸಿಬ್ಬಂದಿಯಿಂದಲೇ ನಡೆಸಲ್ಪಡುವ ವಿಶೇಷ ಕೆಫೆಯಾಗಿದೆ.
ಸಿಜೆಐ ಚಂದ್ರಚೂಡ್ ಅವರು ಇತರ ನ್ಯಾಯಮೂರ್ತಿಗಳೊಂದಿಗೆ ಆಗಮಿಸಿ ರಿಬ್ಬನ್ ಕತ್ತರಿಸುವ 'ಮಿಟ್ಟಿ ಕೆಫೆ'ಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಸಿಜೆಐ ಅವರನ್ನು ಕೆಫೆಯ ಸಿಬ್ಬಂದಿ ಬರಮಾಡಿಕೊಂಡರು. ಈ ವೇಳೆ, ವಿಶೇಷಚೇತನ ಸಿಬ್ಬಂದಿಯ ಕೈ ಹಿಡಿದುಕೊಂಡು ಬಂದು ನ್ಯಾ.ಚಂದ್ರಚೂಡ್ ಸರಳತೆ ಮರೆದರು. ಉದ್ಘಾಟನೆ ಬಳಿಕ ಕೆಫೆ ವೀಕ್ಷಿಸಿದರು. ಸಿಬ್ಬಂದಿ ಜೊತೆಗೂ ಮುಕ್ತವಾಗಿ ಮಾತನಾಡಿ ಚರ್ಚಿಸಿದರು. ಮಿಟ್ಟಿ ಕೆಫೆಯನ್ನು ಬೆಂಬಲಿಸುವಂತೆ ಬಾರ್ ಅಸೋಸಿಯೇಷನ್ವಕೀಲರು ಹಾಗೂ ಸಿಬ್ಬಂದಿಗೆ ಸಿಜೆಐ ಮನವಿ ಮಾಡಿದರು.
'ಮಿಟ್ಟಿ' ಎಂಬುವುದು ಸಾಮಾಜಿಕ ಪ್ರತಿಷ್ಠಾನವೊಂದರ ಪರಿಕಲ್ಪನೆ. ಇದುವರೆಗೆ 35ಕ್ಕೂ ಹೆಚ್ಚು ಕೆಫೆಗಳನ್ನು ನೂರಾರು ವಿಶೇಷಚೇತನ ಸಿಬ್ಬಂದಿಯೇ ನಿರ್ವಹಿಸುತ್ತಿದ್ದಾರೆ. ದೈಹಿಕ, ಬೌದ್ಧಿಕ ಮತ್ತು ಮಾನಸಿಕ ವಿಕಲಾಂಗತೆ ಹೊಂದಿರುವ ವಯಸ್ಕರು ಹಾಗೂ ಇತರ ದುರ್ಬಲ ಸಮುದಾಯಗಳ ಜನರು ಆರ್ಥಿಕ ಮತ್ತು ಸಾಮಾಜಿಕ ಸಬಲತೆ ಹೊಂದುವ ನಿಟ್ಟಿನಲ್ಲಿ ಈ ಸಾಮಾಜಿಕ ಪ್ರತಿಷ್ಠಾನ ಕೆಲಸ ಮಾಡುತ್ತಿದೆ.
ಇದನ್ನೂ ಓದಿ:ದೀಪಾವಳಿ: ಕೈದಿಗಳಿಂದ ರುಚಿರುಚಿಯಾದ ಸಿಹಿತಿಂಡಿ ತಯಾರಿ, ಮಾರಾಟ- ವಿಡಿಯೋ