10 ವರ್ಷ ಸೇವೆಯ ಬಳಿಕ ನಿವೃತ್ತಿ ಹೊಂದಿದ ಶ್ವಾನಗಳು: ಹೃದಯಸ್ಪರ್ಶಿ ಬೀಳ್ಕೊಡುಗೆ - ಎರಡು ಶ್ವಾನಗಳಿಗೆ ಅದ್ಧೂರಿಯಾಗಿ ಬೀಳ್ಕೊಡುಗೆ
ಕೇರಳ: ಕೊಚ್ಚಿನ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನಲ್ಲಿರುವ (ಸಿಐಎಎಲ್) ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಸುಮಾರು ಹತ್ತು ವರ್ಷಗಳಿಂದ ಸೇವೆ ಸಲ್ಲಿಸಿದ ಎರಡು ಶ್ವಾನಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ನಿವೃತ್ತಿ ಹೊಂದಿದ ಲ್ಯಾಬ್ರಡಾರ್ ಸ್ಪಾರ್ಕಿ ಮತ್ತು ಕಾಕರ್ ಸ್ಪೈನಿಯೆಲ್ ಇವಾನ್ ಎಂಬ ಶ್ವಾನಗಳ ಕೊರಳಿಗೆ ಪದಕ ಹಾಕುವ ಮೂಲಕ ಗೌರವಿಸಲಾಯಿತು. ಸಿಐಎಸ್‌ಎಫ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Last Updated : Feb 3, 2023, 8:31 PM IST