ಹಿಂದೂ ಧರ್ಮಕ್ಕೆ ಮರು ಮತಾಂತರವಾದ 170 ಕ್ರಿಶ್ಚಿಯನ್ ಕುಟುಂಬಗಳು- ವಿಡಿಯೋ - ಸ್ವಾಮಿನಾರಾಯಣ ಪಂಥದ ಸಂತರು
ನವಸಾರಿ (ಗುಜರಾತ್):ಇಲ್ಲಿನ170ಕ್ಕೂ ಹೆಚ್ಚು ಕುಟುಂಬಗಳು ಕ್ರಿಶ್ಚಿಯನ್ ಧರ್ಮ ತೊರೆದು ಮತ್ತೆ ಹಿಂದೂ ಧರ್ಮಕ್ಕೆ ಮರುಮತಾಂತರಗೊಂಡರು. ನವಸಾರಿಯ ವಂಸ್ಡಾ ತಾಲೂಕಿನ ಕವ್ಡೇಜ್ ಗ್ರಾಮದಲ್ಲಿ ಅಗ್ನಿವೀರ್ ಹಿಂದೂ ಸಂಘಟನೆ ಆಯೋಜಿಸಿದ್ದ ಶುದ್ಧೀಕರಣ ಮಹಾಯಜ್ಞದಲ್ಲಿ ಮರು ಮತಾಂತರದ ವಿಧಿವಿಧಾನ ನಡೆಯಿತು. ಕಾರ್ಯಕ್ರಮದಲ್ಲಿ ಸ್ವಾಮಿನಾರಾಯಣ ಪಂಥದ ಸಂತರು ಉಪಸ್ಥಿತರಿದ್ದರು. ಈವರೆಗೆ 9,000ಕ್ಕೂ ಹೆಚ್ಚು ಕುಟುಂಬಗಳು ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡಿವೆ.
ಇಲ್ಲಿನ ಬುಡಕಟ್ಟು ಪ್ರದೇಶಗಳಲ್ಲಿ ಸಾಕಷ್ಟು ಮತಾಂತರ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರುಗಳಿವೆ. ಕುಟುಂಬದ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರು ಕ್ರಿಶ್ಚಿಯನ್ ಧರ್ಮ ಸೇರಿದರೆ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಹುಟ್ಟಿಸಿ ಅನೇಕ ಕುಟುಂಬಗಳು ಹಿಂದೂ ಧರ್ಮ ತೊರೆದು ಕ್ರಿಶ್ಚಿಯನ್ ಧರ್ಮ ಸೇರಿಕೊಂಡಿದ್ದವು ಎಂದು ತಿಳಿದು ಬಂದಿದೆ.
ಅಗ್ನಿವೀರ ಹಿಂದೂ ಸಂಘದ ಮಹೇಂದ್ರ ರಾಜಪುರೋಹಿತ್ ಎಂಬವರು ಮಾತನಾಡಿ, "ಕೆಲವು ವರ್ಷಗಳ ಹಿಂದೆ ಹಿಂದೂ ಬುಡಕಟ್ಟು ಜನರು ಕಾರಣಾಂತರಗಳಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಇಂತಹ ಪ್ರದೇಶಗಳಿಗೆ ಹೋಗಿ ಭಜನೆ, ಕೀರ್ತನೆ ಮಾಡಿ ಸಾಮೂಹಿಕ ವಿವಾಹ ಮಾಡಿಸುತ್ತಿದ್ದೆವು. ಇದರಿಂದ ಜನರು ಪ್ರಭಾವಿತರಾಗುತ್ತಿದ್ದರು. ಇದೀಗ ಹಲವು ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿವೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ: ಸಾಂವಿಧಾನಿಕ ಪೀಠದಲ್ಲಿ ವಿಚಾರಣೆ ಆರಂಭ