ಹುಬ್ಬಳ್ಳಿಗೆ ಬರುತ್ತಿದ್ದಾಳೆ ಕೆಂಪು ಸುಂದರಿ: ಮೂರು ದಿನಗಳ ಭರ್ಜರಿ ಮೇಳ...! - ಈಟಿವಿ ಭಾರತ ಕನ್ನಡ
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಎರಡು ವರ್ಷಗಳ ಬಳಿಕ 11ನೇ ಒಣ ಮೆಣಸಿನಕಾಯಿ ಮೇಳವನ್ನು ಮೂರುಸಾವಿರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ತೋಟಗಾರಿಕೆ ಇಲಾಖೆಯ ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ಸಹಭಾಗಿತ್ವದಲ್ಲಿ ಮೂರು ದಿನಗಳ ಮೇಳ ನಡೆಯಲಿದೆ. ಜನವರಿ 20 ರಿಂದ 23ರ ವರೆಗೆ ಮೆಣಸಿನ ಮೇಳ ನಡೆಯಲಿದೆ. ಇನ್ನು ರೈತರಿಗೆ ತಾವು ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ವಿವಿಧ ಒಣ ಮೆಣಸಿನಕಾಯಿಗಳು ಲಭ್ಯವಿರಲಿದೆ.
ಕಳೆದ 10 ವರ್ಷಗಳಿಂದ ಮೇಳ ನಡೆಸಿಕೊಂಡು ಬರಲಾಗುತ್ತಿದೆ. ಮೇಳಕ್ಕೆ ರೈತರಿಂದ ಹಾಗೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಉತ್ತರ ಕರ್ನಾಟಕ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಾಂಬಾರು ಮಂಡಳಿ ಮೇಳ ಆಯೋಜಿಸಿದೆ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಗಿರೀಶ್ ತಿಳಿಸಿದರು.
ಇದನ್ನೂ ನೋಡಿ :ಬೆಂಗಳೂರಲ್ಲಿ ದ್ರಾಕ್ಷಾರಸ ಮೇಳ: ಕಣ್ಮನ ಸೆಳೆದ ತರಹೇವಾರಿ ವೈನ್