ಚಿಕ್ಕಮಗಳೂರು ಹಬ್ಬ: ಸಿ.ಟಿ.ರವಿ ದಂಪತಿ ಭರ್ಜರಿ ಡ್ಯಾನ್ಸ್- ವಿಡಿಯೋ - ಶಾಸಕ ಸಿ ಟಿ ರವಿ ಮುರುಗನ್
ಚಿಕ್ಕಮಗಳೂರು :ಚಿಕ್ಕಮಗಳೂರು ಉತ್ಸವದಲ್ಲಿ 'ಸಿಬಿಐ ಶಂಕರ್' ಚಿತ್ರದ ಹಾಡಿಗೆ ಬಿಜೆಪಿ ಮುಖಂಡ ಸಿ.ಟಿ.ರವಿ ದಂಪತಿ ಕುಣಿದು ಕುಪ್ಪಳಿಸಿದರು. ನಿನ್ನೆ ನಡೆದ ಸಂಗೀತ ಸಂಜೆಯಲ್ಲಿ ಗಾಯಕ ರಾಜೇಶ್ ಕೃಷ್ಣನ್ ಹಾಡಿದ ಗೀತಾಂಜಲಿ ಹಾಡಿಗೆ ಜನರಲ್ಲಿ ಜೋಶ್ ಉಂಟುಮಾಡಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಾವಿರಾರು ಜನರ ಮಧ್ಯೆಯೇ ಫುಡ್ ಕೋರ್ಟ್‌ಗೆ ಆಗಮಿಸಿ ಪುಳಿಯೊಗರೆ, ಮದ್ದೂರು ವಡೆ, ಹೋಳಿಗೆ, ಬಜ್ಜಿ, ಪೊಂಗಲ್, ಶಾವಿಗೆ ಬಾತ್ ಮತ್ತು ಕಾಫಿ ಸವಿದರು. ಒಂದು ಕಿ.ಮೀ. ವ್ಯಾಪ್ತಿಯ ಫುಡ್ ಕೋರ್ಟ್‌ನಲ್ಲಿ ಸಚಿವರು ಸುತ್ತಾಟ ನಡೆಸಿದರು.
Last Updated : Feb 3, 2023, 8:39 PM IST