777 ಚಾರ್ಲಿ.. ಗಮನ ಸೆಳೆದ ಚಿಕ್ಕಬಳ್ಳಾಪುರ 'ಚಾರ್ಲಿ ಅಭಿಮಾನಿಗಳ ಸಂಘ'ದ ಬ್ಯಾನರ್ - 777 Charlie
ಚಿಕ್ಕಬಳ್ಳಾಪುರ: 777 ಚಾರ್ಲಿ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಾರ್ಲಿಗೂ ಚಿಕ್ಕಬಳ್ಳಾಪುರದಲ್ಲಿ ಸಂಘವೊಂದು ಹುಟ್ಟಿಕೊಂಡಿದೆ. ಹೌದು, ನಗರದ ಬಾಲಾಜಿ ಚಿತ್ರಮಂದಿರ ಬಳಿ 'ಚಾರ್ಲಿ ಅಭಿಮಾನಿಗಳ ಸಂಘ, ಭುವನೇಶ್ವರಿ ವೃತ್ತ ಚಿಕ್ಕಬಳ್ಳಾಪುರ' ಎಂಬ ಹೆಸರಿನ ಬ್ಯಾನರ್ ಅನ್ನು ಸ್ಥಳೀಯರು ಹಾಕಿದ್ದು ಎಲ್ಲರ ಗಮನ ಸೆಳೆದಿದೆ. ಈ ಫೋಟೋ, ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:23 PM IST