ಕರ್ನಾಟಕ

karnataka

ಐಎಫ್​ಎಸ್​​ ಪರೀಕ್ಷೆಯಲ್ಲಿ 20ನೇ ರ‍್ಯಾಂಕ್ ಪಡೆದ ರೈತ ಕುಟುಂಬದ ಆಕರ್ಷ್

ETV Bharat / videos

'ಆಕರ್ಷ್‌'ಕ ವ್ಯಕ್ತಿತ್ವ! IFS​​ ಪರೀಕ್ಷೆಯಲ್ಲಿ 20ನೇ ರ‍್ಯಾಂಕ್ ಪಡೆದ ಶಿಡ್ಲಘಟ್ಟದ ರೈತ ಕುಟುಂಬದ ಯುವಕ- ವಿಡಿಯೋ - IFS exam

By

Published : Jul 9, 2023, 9:56 AM IST

ಚಿಕ್ಕಬಳ್ಳಾಪುರ: ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ಇಂಡಿಯನ್ ಫಾರೆಸ್ಟ್ ಸರ್ವೀಸಸ್‌ (ಐಎಫ್‌ಎಸ್‌) ಪರೀಕ್ಷೆಯಲ್ಲಿ ಜಿಲ್ಲೆಯ ಟಿ.ಎಂ. ಆಕರ್ಷ್ ಎಂಬವರು 20ನೇ ರ‍್ಯಾಂಕ್ ಗಳಿಸಿದ್ದಾರೆ. ಶಿಡ್ಲಘಟ್ಟ ತಾಲೂಕು ತಲದುಮ್ಮನಹಳ್ಳಿಯ ಸಾಧಾರಣ ರೈತ ಕುಟುಂಬದಲ್ಲಿ ಜನಿಸಿದ ಇವರು, ತಮ್ಮ ಓದಿನ ಜೊತೆ ತಂದೆ, ತಾಯಿಯೊಂದಿಗೆ ಜಮೀನಿನಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಪಿಯುಸಿವರೆಗೂ ಹುಟ್ಟೂರಿನಲ್ಲೇ ವ್ಯಾಸಂಗ ಮಾಡಿದ್ದಾರೆ. ಇದೀಗ ಐಎಫ್‌ಎಸ್ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆಗೈದು ಪೋಷಕರು ಹಾಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಐಎಎಸ್, ಐಪಿಎಸ್, ಐಎಫ್‌ಎಸ್ ಹಾಗು ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಸುಲಭವಲ್ಲ. ಬದುಕಿನಲ್ಲಿ ಸಾಧಿಸಬೇಕೆಂಬ ಛಲ, ನಿರ್ದಿಷ್ಟ ಗುರಿಯೊಂದಿಗೆ ಓದುವ ಮನಸ್ಸಿದ್ದರೆ ಸಾಧನೆ ಕಷ್ಟವೂ ಅಲ್ಲ. ಸಾಧನೆಗೆ ಬಡತನ, ಗ್ರಾಮೀಣ ಹಿನ್ನಲೆ ಯಾವುದೂ ಅಡ್ಡಿಯಾಗದು ಎಂಬುದನ್ನು ಇಲ್ಲಿ ಆಕರ್ಷ್​ ಸಾಧಿಸಿ ತೋರಿಸಿದ್ದಾರೆ. 

"ನಮ್ಮ ಪೀಳಿಗೆ ಉಳಿಯಬೇಕಾದರೆ ಪರಿಸರ ಕಾಳಜಿ ಇರಬೇಕು. ಅಭಿವೃದ್ಧಿಯೆಡೆ ಹೆಚ್ಚು ಗಮನ ಹರಿಸುತ್ತಿರುವುದರೊಂದಿಗೆ ಅರಣ್ಯ ನಾಶ, ವನ್ಯಜೀವಿಗಳ ಸಂರಕ್ಷಣೆಯತ್ತಲೂ ಗಮನಹರಿಸಬೇಕು" ಎಂದು ಆಕರ್ಷ್‌ ಹೇಳುತ್ತಾರೆ.

ಇದನ್ನೂ ಓದಿ :ಅಂಧತ್ವ ಮೆಟ್ಟಿ ನಿಂತ ಬೆಳಗಾವಿ ಯುವಕ: ಸರಾಗವಾಗಿ ಕಂಪ್ಯೂಟರ್​ನಲ್ಲೇ ಕೆಲಸ ಮಾಡುವ ವಿಶೇಷ ಚೇತನ

ABOUT THE AUTHOR

...view details