ಕರ್ನಾಟಕ

karnataka

ತಾಜ್ ಮಹಲ್ ಭೇಟಿ ನೀಡಿದ ಕೀನ್ಯಾ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನಿಯೋಗ

ETV Bharat / videos

ತಾಜ್ ಮಹಲ್​​ಗೆ ಭೇಟಿ ನೀಡಿದ ಕೀನ್ಯಾ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನಿಯೋಗ: ವಿಡಿಯೋ - ಜಸ್ಟಿಸ್ ಕೂಮ್

By

Published : Mar 11, 2023, 5:29 PM IST

ಆಗ್ರಾ(ಉತ್ತರ ಪ್ರದೇಶ): ಕೀನ್ಯಾ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮಾರ್ಥಾ ಕೆ. ಕೂಮ್ ನೇತೃತ್ವದ ನಿಯೋಗವು ಭಾರತಕ್ಕೆ ಭೇಟಿ ನೀಡಿದೆ. ಈ ನಿಯೋಗ ಇಂದು(ಶನಿವಾರ) ಬೆಳಗ್ಗೆ ಕೇಂದ್ರ ಸಚಿವ ಪ್ರೊ.ಎಸ್.ಪಿ.ಸಿಂಗ್ ಬಘೇಲ್ ಅವರೊಂದಿಗೆ ತಾಜ್ ಮಹಲ್‌ಗೆ ಭೇಟಿ ನೀಡಿತು. ನಿಯೋಗದ ಸದಸ್ಯರು ತಾಜ್ ಮಹಲ್​​ನ ಸೌಂದರ್ಯವನ್ನು ಕಣ್ತುಂಬಿಕೊಂಡರು. ತಾಜ್ ಮಹಲ್​​ನಲ್ಲಿ ಒಂದೂವರೆ ಗಂಟೆ ಸಮಯ ಕಳೆದಿದ್ದಾರೆ. ಈ ಸಂದರ್ಭದಲ್ಲಿ ಸಿಐಎಸ್ಎಫ್ ಭದ್ರತೆಯ ಜವಾಬ್ದಾರಿ ವಹಿಸಿಕೊಂಡಿತ್ತು.

ಬಳಿಕ ಕೇಂದ್ರ ಸಚಿವ ಎಸ್.ಪಿ.ಸಿಂಗ್ ಬಘೇಲ್ ಅವರು ಕೀನ್ಯಾದ ನಿಯೋಗದೊಂದಿಗೆ ಮಾತುಕತೆ ನಡೆಸಿದರು. ಸಭೆಯಲ್ಲಿ, ಉಭಯ ದೇಶಗಳ ನಡುವಿನ ಪರಸ್ಪರ ಸೌಹಾರ್ದ ಸಂಬಂಧವನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಚರ್ಚೆ ನಡೆಸಲಾಯಿತು. ಇದರೊಂದಿಗೆ ಇತರ ವಿಷಯಗಳ ಜತೆಗೆ ಮೋದಿ ಸರ್ಕಾರದ ನೇತೃತ್ವದಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯವು ಶ್ರೀಸಾಮಾನ್ಯರಿಗೆ 'ನ್ಯಾಯ ಪ್ರವೇಶ'ದ ದಿಕ್ಕಿನಲ್ಲಿ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ಅವರಿಗೆ ತಿಳಿಸಲಾಯಿತು. ಭಾರತೀಯ ನ್ಯಾಯಾಂಗ ವ್ಯವಸ್ಥೆಯನ್ನು ಹತ್ತಿರದಿಂದ ಅರ್ಥಮಾಡಿಕೊಂಡಿದ್ದು, ಅದನ್ನು ಶ್ಲಾಘಿಸಿದ್ದಾರೆ ಎಂದು ಸಚಿವ ಬಘೇಲ್ ಹೇಳಿದ್ದಾರೆ.  

ಮುಖ್ಯ ನ್ಯಾಯಮೂರ್ತಿ ಮಾರ್ಥಾ ಕೆ.ಕೂಮ್ ನೇತೃತ್ವದ ಕೀನ್ಯಾದ ಎಸ್‌ಸಿ ನಿಯೋಗ ನಿನ್ನೆ(ಫೆ.10) ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದರು. ನಿಯೋಗವನ್ನು ಅವರ ನಿವಾಸಕ್ಕೆ ಸ್ವಾಗತಿಸಿದ ರಾಷ್ಟ್ರಪತಿ ಮುರ್ಮು ಕೀನ್ಯಾ ಮತ್ತು ಭಾರತ ಶತಮಾನಗಳಷ್ಟು ಹಳೆಯ ಸೌಹಾರ್ದ ಸಂಬಂಧವನ್ನು ಹಂಚಿಕೊಂಡಿವೆ ಎಂದು ಹೇಳಿದರು. ಕೀನ್ಯಾದ ಅಭಿವೃದ್ಧಿ ಪಾಲುದಾರನಾಗಲು ಭಾರತ ಹೆಮ್ಮೆಪಡುತ್ತದೆ ಮತ್ತು ಕೀನ್ಯಾದ ಹೊಸ ಸರ್ಕಾರದೊಂದಿಗೆ ಉನ್ನತ ಮಟ್ಟದ ರಾಜಕೀಯ ಸಂಪ್ರದಾಯವನ್ನು ಕಾಪಾಡಿಕೊಳ್ಳಲು ಉತ್ಸುಕವಾಗಿದೆ. ಜತೆಗೆ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ರಾಷ್ಟ್ರಪತಿ ಮುರ್ಮು ಹೇಳಿದರು. 

ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ: ಜಸ್ಟಿಸ್ ಕೂಮ್ ಅವರು ಕೀನ್ಯಾದ ಸುಪ್ರೀಂ ಕೋರ್ಟ್‌ನ 'ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ'ಯಾಗಿದ್ದಾರೆ. ಎಲ್ಲರಿಗೂ ನ್ಯಾಯ ದೊರಕಿಸಲು ಮತ್ತು ಕೀನ್ಯಾದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಅವರ ಪ್ರಯತ್ನಗಳನ್ನು ರಾಷ್ಟ್ರಪತಿ ಮುರ್ಮು ಶ್ಲಾಘಿಸಿದರು.

ABOUT THE AUTHOR

...view details