ಕರ್ನಾಟಕ

karnataka

ETV Bharat / videos

ತಿಂಗಳಾಂತ್ಯದಲ್ಲಿ ಛತ್ ಹಬ್ಬ: ಸಾಗರ ಕಿನಾರೆಯಲ್ಲಿ ಹೆಚ್ಚಿದ ಬಂದೋಬಸ್ತ್ - ಈಟಿವಿ ಭಾರತ​ ಕರ್ನಾಟಕ

By

Published : Oct 29, 2022, 12:06 PM IST

Updated : Feb 3, 2023, 8:30 PM IST

ಮುಂಬೈ(ಮಹಾರಾಷ್ಟ್ರ) : ಇಲ್ಲಿ ಛತ್ ಹಬ್ಬವನ್ನು ತಿಂಗಳಾಂತ್ಯದಲ್ಲಿ(ಅ.31) ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮುಂಬೈನಲ್ಲಿ ಒಟ್ಟು 81 ಸ್ಥಳಗಳಲ್ಲಿ ಛತ್ ಆಚರಿಸಲಾಗುತ್ತದೆ. ಆದರೆ, ಜುಹು ಬೀಚ್‌ನ ಆಚರಣೆ ಹೆಚ್ಚು ಜನಪ್ರಿಯವಾಗಿದೆ. ಛತ್ ಹಬ್ಬದ ಸಲುವಾಗಿ ಸೂರ್ಯೋದಯ ಮತ್ತು ಸೂರ್ಯಾಸ್ತದಲ್ಲಿ ಮಹಿಳೆಯರು ಬಾಸ್ಕರ ದೇವರಿಗೆ ಅರ್ಘ್ಯವನ್ನು ಅರ್ಪಿಸುವ ಮೂಲಕ ಉಪವಾಸ ಅಂತ್ಯ ಮಾಡುತ್ತಾರೆ. ಹೀಗಾಗಿ ಬೀಚ್​ನ ದಡದಲ್ಲಿ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಹೆಚ್ಚಿಸಿದ್ದು, ಅಲ್ಲದೇ ಜೀವರಕ್ಷಕ ದಳಗಳನ್ನು ಸಹ ನೇಮಿಸಲಾಗಿದೆ. 31 ರಂದು ಬಿಹಾರಿ ಅಘಾಡಿ ಅವರಿಂದ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಲಾಗುತ್ತದೆ.
Last Updated : Feb 3, 2023, 8:30 PM IST

ABOUT THE AUTHOR

...view details