ಉತ್ತರ ಕನ್ನಡ: ಸಂಚರಿಸುತ್ತಿದ್ದಾಗ ಬಸ್‌ನ ಚೆಸ್ಸಿ ಕಟ್, ಪ್ರಯಾಣಿಕರಿಗೆ ಗಾಯ - ಬಸ್‌ನ ಚೆಸ್ಸಿ ಕಟ್
Published : Jan 2, 2024, 11:49 AM IST
ಕಾರವಾರ:ಸಂಚರಿಸುತ್ತಿದ್ದಾಗಲೇ ಸರ್ಕಾರಿ ಸಾರಿಗೆ ಬಸ್‌ನ ಚೆಸ್ಸಿ ತುಂಡಾಗಿ ಬಿದ್ದು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕಾರವಾರ ನಗರದ ಹಬ್ಬುವಾಡ ರಸ್ತೆಯಲ್ಲಿ ಇಂದು ನಡೆದಿದೆ. ಕಾರವಾರ ನಗರದಿಂದ ಕೆರವಡಿ ಗ್ರಾಮಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಐವತ್ತಕ್ಕೂ ಅಧಿಕ ಪ್ರಯಾಣಿಕರಿದ್ದರು. ಈ ಸಂದರ್ಭದಲ್ಲಿ ಬಸ್‌ನ ಹಿಂಬದಿ ಚೆಸ್ಸಿ ಒಮ್ಮೆಲೆ ತುಂಡಾಗಿದ್ದು, ಪಲ್ಟಿಯಾಗುವ ಹಂತ ತಲುಪಿತ್ತು.
ಆದರೆ, ನಿಯಂತ್ರಣ ಕಳೆದುಕೊಂಡ ಬಸ್ ಅನ್ನು ಸಾರ್ವಜನಿಕರೇ ತಡೆದು ನಿಲ್ಲಿಸಿ ಸಂಭವನೀಯ ಅವಘಡಗಳನ್ನು ತಪ್ಪಿಸಿದ್ದಾರೆ. ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಸ್ಥಿತಿಯಲ್ಲಿಲ್ಲದ ಬಸ್ ಓಡಾಡಲು ಬಿಟ್ಟ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿಯೇ ಬಸ್ ಪಲ್ಟಿಯಾದ ಹಿನ್ನೆಲೆಯಲ್ಲಿ ಕಾರವಾರ-ಕೈಗಾ ರಸ್ತೆಯಲ್ಲಿ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು.
ಇದನ್ನೂ ಓದಿ:ವರ್ಷಾಂತ್ಯಕ್ಕೆ ದಾಖಲೆಯ ಪ್ರಯಾಣ ಕಂಡ ಮಂಗಳೂರು ವಿಮಾನ ನಿಲ್ದಾಣ
ಇನ್ನು, ಇಂದು ಮೈಸೂರಿನಲ್ಲಿ ಕೆಎಸ್ಆರ್ಟಿಎಸ್ ಬಸ್ ಮತ್ತು ಜೀಪಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಜೀಪು ನಜ್ಜುಗುಜ್ಜಾಗಿದೆ. ಘಟನೆ ಹುಣಸೂರು ನಗರದ ಆರ್ಟಿಓ ಕಚೇರಿ ಬಳಿ ನಡೆದಿದೆ.