ಕರ್ನಾಟಕ

karnataka

ಕಳಶ ಬಿದ್ದ ಹಿನ್ನೆಲೆ ರಥೋತ್ಸವ ಮೊಟಕು

ETV Bharat / videos

ಅರಸೀಕೆರೆಯಲ್ಲಿ ರಥದ ಕಳಶ ಬಿದ್ದು ಪೊಲೀಸ್​ ಸಿಬ್ಬಂದಿಗೆ ಗಂಭೀರ ಗಾಯ.. ರಥೋತ್ಸವ ಮೊಟಕು - ಗುಪ್ತಚರ ಇಲಾಖೆಯ ಸಿಬ್ಬಂದಿ

By

Published : Jul 1, 2023, 6:24 AM IST

ಅರಸೀಕೆರೆ (ಹಾಸನ): ರಥೋತ್ಸವದ ವೇಳೆ ರಥದ ಗೋಪುರದ ಕಳಶ ಬಿದ್ದು ರಾಜ್ಯ ಗುಪ್ತಚರ ಇಲಾಖೆಯ ಪೊಲೀಸ್ ಸಿಬ್ಬಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅರಸೀಕೆರೆ ಪಟ್ಟಣದ ಹೊರವಲಯದ ಮಾಲೆಕಲ್ಲು ತಿರುಪತಿ ಗ್ರಾಮದಲ್ಲಿ ನಡೆದಿದೆ. 

ಮಾಲೆಕಲ್ಲು ತಿರುಪತಿ ದೇವಾಲಯದಲ್ಲಿ ಇಂದು ದ್ವಾದಶಿ ಇದ್ದದ್ದರಿಂದ ಅದ್ದೂರಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ತಿರುಪತಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ರಥೋತ್ಸವದ ವೇಳೆ ರಥ ಮುಂದಕ್ಕೆ ಚಲಿಸುತ್ತದೆ. ಪ್ರಸಾದ ಮೇಲ್ಭಾಗದಲ್ಲಿದ್ದ ಕಳಶ ರಥದ ಕೆಳಭಾಗದಲ್ಲಿದ್ದ ಗುಪ್ತಚರ ಇಲಾಖೆಯ ಸಿಬ್ಬಂದಿ ಚಂದ್ರಮೌಳಿ ಮೇಲೆ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗಳಾಗಿದ್ದು, ಸದ್ಯ ಪ್ರಥಮ ಚಿಕಿತ್ಸೆಯನ್ನು ಅರಸೀಕೆರೆಯಲ್ಲಿ ನೀಡಿ ನಂತರ ಹಾಸನಕ್ಕೆ ಶಿಫ್ಟ್ ಮಾಡಿದ್ದಾರೆ. 

ಇದನ್ನೂ ಓದಿ:ಹುಣ್ಣಿಮೆಯ ದಿನ ಊರು ಖಾಲಿ ಮಾಡ್ತಾರೆ ಗ್ರಾಮಸ್ಥರು: ಅಪಶಕುನ ತಡೆಗೆ ಉಪಾಯ!

ರಥದ ಮೇಲ್ಭಾಗದ ಕಳಶ ಬಿದ್ದಿದ್ದರಿಂದ ಈ ಬಾರಿಯ ರಥೋತ್ಸವ ಅಪಶಕುನವೆಂದೇ ಭಕ್ತರು ಭಾವಿಸಿದ್ದಾರೆ. ಅರಸೀಕೆರೆ ತಾಲೂಕಿಗೆ ಏನಾದ್ರೂ ಘಟನೆಗಳು ನಡೆಯಬಹುದು ಎಂಬ ಆತಂಕ ಮನೆ ಮಾಡಿದ್ದು, ಕಳಶ ಬಿದ್ದ ಹಿನ್ನೆಲೆ ಸದ್ಯ ರಥೋತ್ಸವ ಆಚರಣೆಯನ್ನು ಮೊಟಕುಗೊಳಿಸಲಾಗಿದೆ.

ಇದನ್ನೂ ಓದಿ:ಕಳಿಚಿ ಬಿತ್ತು ಶಿಬಾರದ ತ್ರಿಶೂಲ.. ಮೈಲಾರ ಕಾರ್ಣಿಕೋತ್ಸವಕ್ಕೂ ಮುನ್ನ ಅಪಶಕುನವಾಯ್ತೇ?

ABOUT THE AUTHOR

...view details