ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಗಂಗಾವತಿಯಲ್ಲಿ ಮಹಿಳೆಯರಿಂದ ಹನುಮಾನ್ ತಾಂಡವ್ ಮಂತ್ರ ಪಠಣ
Published : Jan 9, 2024, 2:24 PM IST
|Updated : Jan 9, 2024, 4:04 PM IST
ಗಂಗಾವತಿ (ಕೊಪ್ಪಳ) : ಜನವರಿ 22ರಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದಲ್ಲಿ ಉದ್ಘಾಟನೆ ಅದ್ಧೂರಿಯಾಗಿ ನಡೆಯಲಿದೆ. ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಗಂಗಾವತಿಯಲ್ಲಿ ಮಹಿಳೆಯರಿಂದ ಸಾಮೂಹಿಕ ಹನುಮಾನ್ ತಾಂಡವ್ ಮಂತ್ರ ಪಠಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ಜನಾರ್ದನ ರೆಡ್ಡಿ ಮತ್ತು ಪತ್ನಿ ಅರುಣಾ ಲಕ್ಷ್ಮಿ ಭಾಗಿಯಾಗಿದ್ದರು.
ಗಂಗಾವತಿ ತಾಲೂಕಿನ ಪ್ರಸಿದ್ಧ ಪಂಪಾ ಸರೋವರದಲ್ಲಿ ನಡೆದ ಸಾಮೂಹಿಕ ಮಂತ್ರ ಪಠಣ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದರು. ಬಳಿಕ ವಿಶೇಷ ಪೂಜೆ ಸಲ್ಲಿಸಲಾಯಿತು. ಮರ್ಯಾದ ಪುರುಷೋತ್ತಮ ಶ್ರೀ ರಾಮ ತನ್ನ ಬಂಟ ಹನುಮಂತನನ್ನು ಪಂಪಾ ಸರೋವರದಲ್ಲಿ ಭೇಟಿ ಮಾಡಿದ್ದ ಎಂಬ ಬಗ್ಗೆ ಐತಿಹ್ಯವಿದೆ.
ನೂರಾರು ಮಹಿಳೆಯರು ಏಕಕಾಲಕ್ಕೆ ಹನುಮಾನ್ ತಾಂಡವ್ ಪಠಣ ಮಾಡಿದ್ದು ಗಮನ ಸೆಳೆಯಿತು. ಪಂಪಾ ಸರೋವರದ ಕಲ್ಯಾಣಿಯಲ್ಲಿ ಸುತ್ತುವರಿದು ಶಿಸ್ತಿನಿಂದ ಕುಳಿತ ಮಹಿಳೆಯರು ದೀಪ ಹಚ್ಚಿ ಪ್ರಾರ್ಥನೆ ಮಾಡಿದರು. ಫೌಂಡೇಶನ್ ಫಾರ್ ಹೋಲಿಸ್ಟಿಕ್ ಡೆವಲಪ್ಮೆಂಟ್ ಸಂಸ್ಥೆ ಮಂತ್ರ ಪಠಣ ಕಾರ್ಯಕ್ರಮ ಆಯೋಜಿಸಿತ್ತು. ಕರ್ನಾಟಕದ 150ಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ :ನೋಡು ನೋಡು ರಾಮಮಂದಿರ, ಪುರುಷೋತ್ತಮನು ನೆಲೆಸುವ ದಿವ್ಯ ದೇಗುಲ: ವಿಡಿಯೋ