ಕರ್ನಾಟಕ

karnataka

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್

ETV Bharat / videos

ನೂತನ 70 ಜನ ಶಾಸಕರು ಡಿಕೆ ಶಿವಕುಮಾರ್ ಬೆಂಬಲಕ್ಕೆ ಇದ್ದೇವೆ: ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ - ದಾವಣಗೆರೆ

By ETV Bharat Karnataka Team

Published : Oct 21, 2023, 7:29 AM IST

ದಾವಣಗೆರೆ:ಡಿಕೆಶಿಯವರ ಮೇಲೆ ಸಿಬಿಐಯಾದರು ತನಿಖೆ ಮಾಡಲಿ, ಖುದ್ದು ಗೃಹಮಂತ್ರಿ ಅಮಿತಾ ಶಾ ಬಂದೇ ತನಿಖೆ ಮಾಡಲಿ. ಯಾವುದಕ್ಕೂ ಜಗ್ಗುವ ಅಗತ್ಯವೇ ಇಲ್ಲ. ಆದರೆ ಸುಪ್ರೀಂ ಕೋರ್ಟ್ ಆದೇಶ ಸ್ವಾಗತ ಮಾಡುತ್ತೇವೆ. ನಾವು ಹೆದರುವಂತಹ ಅವಶ್ಯಕತೆ ಇಲ್ಲ ಎಂದು ದಾವಣಗೆರೆಯ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು ಡಿಸಿಎಂ ಡಿಕೆ ಶಿವಕುಮಾರ್​ ಪರವಾಗಿ ಬ್ಯಾಟ್ ಬೀಸಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆ ಬಂತು ಸಾಲು ಸಾಲು ಬಿಜೆಪಿ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಅದನ್ನು ನೋಡಿ ಸಹಿಸಲಾರದೇ ಬಿಜೆಪಿಯ ಕುತಂತ್ರ ಮಾಡುತ್ತಿದೆ. ಇದು ಇಷ್ಟೇ ಅಲ್ಲ ಇನ್ನು ಮೇಲೆ ಕಾಂಗ್ರೆಸ್​ನವರ ಮನೆ ಮೇಲೆ ಐಟಿ ದಾಳಿ ನಡೆಯುತ್ತಿರುತ್ತವೆ ಎಂದರು. ಜೊತೆಗೆ ಡಿಕೆಶಿ ಜಾರಕಿಹೊಳಿಯವರ ನಡುವೆ ಯಾವುದೇ ವೈಮನಸ್ಸು ಇಲ್ಲ‌‌. ಜಾರಕಿಹೊಳಿ ಸಾಹೇಬ್ರು ಹೇಳಿದ್ದಾರೆ ಅಂತಹದ್ದೇನು ವ್ಯತ್ಯಾಸ ಇಲ್ಲ ಅಂತಾ. ಕೆಲವೊಂದು ಅಸಮಾಧಾನ ಇದ್ದರು ನಾವೆಲ್ಲಾ ಒಂದೇ ಮನೆಯವರು ಬಗೆಹರಿಸಿಕೊಳ್ಳುತ್ತೇವೆ ಎಂದರು.

ಕೆಲವೊಂದು ಶಾಸಕರು ಡಿಕೆ ಶಿವಕುಮಾರ್ ಬಂದಾಗ ಹೋಗಿಲ್ಲ ಅದಕ್ಕೆ ಬೇರೆಯದ್ದೇ ಕಾರಣ ಇದೆ, ಆದರೆ ನಾವು 70 ಜನ ಹೊಸದಾಗಿ ಆಯ್ಕೆಯಾದ ಯುವ ಶಾಸಕರು ಡಿಕೆಶಿಯವರ ಬೆಂಬಲಕ್ಕೆ ಇದ್ದೇವೆ. ನಾವೆಲ್ಲಾ ಎಲ್ಲಾ ರೀತಿಯ ಬೆಂಬಲಕ್ಕೆ ಸಿದ್ಧರಿದ್ದೇವೆ. ಆದರೆ ಸದ್ಯ ಯಾವುದೇ ರೀತಿಯ ವ್ಯತ್ಯಾಸ ಇಲ್ಲ. ಅಲ್ಲದೆ ನಾವು ನೂತನವಾಗಿ ಆಯ್ಕೆಯಾಗಿರುವ ಶಾಸಕರು ಸ್ನೇಹ ಜೀವಿಯಾಗಿ ಜೊತೆಗೆ ಇದ್ದೇವೆ. 70 ಶಾಸಕರು ಡಿಕೆಶಿ ಬೆಂಬಲಕ್ಕೆ ಇದ್ದೇವೆ ಎಂದು ತಿಳಿಸಿದರು. 

ಇದನ್ನೂ ಓದಿ:ಲೋಕಸಭಾ ಚುನಾವಣೆಗೆ ದೇವೇಗೌಡರೇ ಹಾಸನದ ಅಭ್ಯರ್ಥಿಯಾಗಬೇಕು: ಎ.ಮಂಜು

ABOUT THE AUTHOR

...view details