Chandrayana 3: ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ... ಮಹಾತ್ವಾಂಕ್ಷೆ ಯೋಜನೆಗೆ ವಿದ್ಯಾರ್ಥಿಗಳಿಂದ ಶುಭಾಶಯ - ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ
ಧಾರವಾಡ:ಇಡೀ ದೇಶವೇ ಎದುರು ನೋಡುತ್ತಿರುವ ಚಂದ್ರಯಾನ 3 ಉಡಾವಣೆಗೆ ಇನ್ನೇನು ಕೆಲವು ಕ್ಷಣಗಳಷ್ಟೇ ಬಾಕಿ ಇದ್ದು, ಈ ಮಹತ್ತರ ಸಾಧನೆಯನ್ನು ಕಣ್ತುಂಬಿಕೊಳ್ಳಲು, ಬೇರೆ ಬೇರೆ ರಾಜ್ಯಗಳಿಂದ, ನಾಗರಿಕರು, ನಿವೃತ್ತ ವಿಜ್ಞಾನಿಗಳು, ಬಾಹ್ಯಾಕಾಶ ಬಗ್ಗೆ ಆಸಕ್ತರು ಸೇರಿದಂತೆ ಹಲವಾರು ಶಾಲೆಗಳ ವಿದ್ಯಾರ್ಥಿಗಳು ಆಂಧ್ರಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಇಸ್ರೋ ಸಂಸ್ಥೆಯ ಅಂಗಳದಲ್ಲಿ ಜಮಾಯಿಸಿದ್ದಾರೆ. ಇಂದು ಮಧ್ಯಾಹ್ನ 2.35ಕ್ಕೆ ಬಾಹ್ಯಾಕಾಶಕ್ಕೆ ಚಿಮ್ಮಲಿರುವ ಚಂದ್ರಯಾನ 3 ಅನ್ನು ನೇರವಾಗಿ ಕಣ್ತುಂಬಿಕೊಳ್ಳಲು ಹಲವಾರು ವಿದ್ಯಾರ್ಥಿಗಳು ಇಸ್ರೋಗೆ ಬಂದರೆ, ಹಲವಾರು ವಿದ್ಯಾರ್ಥಿಗಳು ತಾವಿದ್ದ ಶಾಲೆಗಳಿಂದಲೇ ಭಾರತದ ಕನಸಿನ ಯೋಜನೆಯ ಯಶಸ್ಸಿಗೆ ಶುಭ ಹಾರೈಸಿದ್ದಾರೆ.
ಅದರಂತೆ ಧಾರವಾಡ ನಗರದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಮೃತ್ಯುಂಜಯ ನಗರ ಬಡಾವಣೆಯಲ್ಲಿರುವ ಶಾಲೆಗಳ ಪುಟಾಣಿ ಮಕ್ಕಳಿಂದ ಹಿಡಿದು 10ನೇ ತರಗತಿ ಮಕ್ಕಳವರೆಗೆ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ ದಿ ಬೆಸ್ಟ್ ಇಸ್ರೋ ಎಂದು ಶುಭ ಕೋರಿದ್ದಾರೆ.
ಇದನ್ನೂ ನೋಡಿ:ಚಂದ್ರಯಾನ 3 ಉಡಾವಣೆಗೆ ಕ್ಷಣಗಣನೆ: ಮಧ್ಯಾಹ್ನ 2.35 ಕ್ಕೆ ನಭಕ್ಕೆ ಚಿಮ್ಮಲಿದೆ ಉಪಗ್ರಹ