Chandrayaan-3: 'ಚಂದಮಾಮ'ನ ಮೇಲೆ 'ವಿಕ್ರಮ್' ಸಾಫ್ಟ್ ಲ್ಯಾಂಡಿಂಗ್ಗಾಗಿ ವಿಘ್ನ ನಿವಾರಕನಿಗೆ ಮಹಾಭಿಷೇಕ
Published : Aug 23, 2023, 12:51 PM IST
ಪುಣೆ (ಮಹಾರಾಷ್ಟ್ರ):ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ಗಾಗಿ ದಗ್ದುಶೇತ್ ಗಣಪತಿಗೆ ಮಹಾಭಿಷೇಕ ನೆರವೇರಿಸಲಾಯಿತು. ಭಾರತದ ಚಂದ್ರಯಾನ ಮಿಷನ್ ಯಶಸ್ವಿಯಾಗುವ ಸಲುವಾಗಿ ಶ್ರೀಮಂತ್ ದಗ್ದುಶೇತ್ ಹಲ್ವಾಯಿ ಗಣಪತಿ ಟ್ರಸ್ಟ್ ವತಿಯಿಂದ ಇಲ್ಲಿನ ಬಾಲಚಂದ್ರ ಗಣೇಶನಿಗೆ ಅಭಿಷೇಕ ಮಾಡಲು ಹಾಲು, ಮೊಸರು, ವಿವಿಧ ಹಣ್ಣಿನ ರಸಗಳು, ಒಣ ಹಣ್ಣುಗಳು ಇತ್ಯಾದಿಗಳನ್ನು ಬಳಸಲಾಗಿದೆ.
ಚಂದ್ರಯಾನ-3 ಇಂದು (ಬುಧವಾರ) ಸಂಜೆ ಚಂದ್ರನ ಮೇಲೆ ಇಳಿಯಲಿದೆ. ಅದರ ಸುರಕ್ಷಿತ ಇಳಿಯುವಿಕೆಯನ್ನು ಖಚಿತಪಡಿಸಿಕೊಳ್ಳಲು ಈ ಅಭಿಷೇಕವನ್ನು ನಡೆಸಲಾಯಿತು. ಇದಲ್ಲದೇ ಗಣಪತಿ ಬಪ್ಪನ ಕಿರೀಟದ ಮೇಲೆ ಚಂದ್ರಾಕೃತಿಯನ್ನು ಅಲಂಕರಿಸಲಾಯಿತು. ಗಣಪತಿ ಬಪ್ಪನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಚಂದ್ರಯಾನ-3 ಲ್ಯಾಂಡರ್ ಚಂದ್ರನ ಇಳಿಯುವ ಸಮಯ ಹತ್ತಿರದಲ್ಲಿದೆ. ಸಂಜೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ. ಚಂದ್ರಯಾನ-2ರ ವಿಫಲ ಪ್ರಯತ್ನದ ನಂತರ, ಪ್ರಸ್ತುತ ಇಸ್ರೋ ಈ ಮಿಷನ್‌ನಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಸದ್ಯ ಈ ವಿಷನ್ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದ್ರಯಾನ-3 ಮಿಷನ್ಗೆ ಚಾಲನೆ ದೊರೆತಿತ್ತು. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವುದು ತುಂಬಾ ಸವಾಲಿನ ಕೆಲಸ.
ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಇಸ್ರೋ ನಿರ್ಧರಿಸಿದೆ. ಇಲ್ಲಿಯವರೆಗೆ ಯಾವುದೇ ದೇಶವೂ ಈ ಪ್ರದೇಶದಲ್ಲಿ ಯಶಸ್ವಿಯಾಗಿ ಇಳಿಯಲು ಸಾಧ್ಯವಾಗಿಲ್ಲ. ಇತ್ತೀಚೆಗಷ್ಟೇ ಆಗಸ್ಟ್ 20ರಂದು ರಷ್ಯಾದ ಲೂನಾ- 25 ಬಾಹ್ಯಾಕಾಶ ನೌಕೆ ಇಲ್ಲಿ ಇಳಿಯುವ ಪ್ರಯತ್ನದಲ್ಲಿ ಪತನಗೊಂಡಿತ್ತು. ಇದರಿಂದ ಈ ಕಾರ್ಯಾಚರಣೆ ಭಾರತ ಯಶಸ್ವಿಯಾದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಮೊದಲ ದೇಶವಾಗಲಿದೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾದಿಂದ 'Chandrayaan 3' ಲ್ಯಾಂಡಿಂಗ್ ವರ್ಚುಯಲ್ ಆಗಿ ವೀಕ್ಷಿಸಲಿರುವ ಪ್ರಧಾನಿ