ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆದ 'ಚಂದ್ರಯಾನ-3' ಕಲಾಕೃತಿ: ವಿಡಿಯೋ - ಸರ್ಕಾರದ ಐದು ಗ್ಯಾರಂಟಿಗಳ ಕಲಾಕೃತಿ
Published : Oct 19, 2023, 7:48 PM IST
|Updated : Oct 19, 2023, 8:21 PM IST
ಮೈಸೂರು:ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾದ ದಸರಾ ಫಲಪುಷ್ಪ ಪ್ರದರ್ಶನವನ್ನು ನಗರದ ಕುಪ್ಪಣ್ಣ ಪಾರ್ಕ್ನಲ್ಲಿ ಆಯೋಜಿಸಲಾಗಿದೆ. ಇಲ್ಲಿ ಸುಮಾರು 2.5 ಲಕ್ಷ ಹೂವುಗಳಿಂದ ತಯಾರಿಸಿದ ವಿವಿಧ ಆಕೃತಿಗಳು ಜನರನ್ನು ತಮ್ಮತ್ತ ಸೆಳೆಯುತ್ತಿವೆ. ಪ್ರಮುಖವಾಗಿ ಚಂದ್ರಯಾನ-3, ಕ್ರಿಕೆಟ್ ವಿಶ್ವಕಪ್, ಚಾಮುಂಡಿ ದೇವಾಲಯ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ವಿವಿಧ ಆಕೃತಿಗಳು ಹೂವಿನಲ್ಲಿ ಮೈದಳೆದಿವೆ.
ಪಾರ್ಕ್ನ ಗಾಜಿನ ಮನೆಯಲ್ಲಿ ಚಂದ್ರಯಾನ-3 ಕಲಾಕೃತಿ ಪ್ರವಾಸಿಗರ ಗಮನ ಸೆಳೆದಿದೆ. ಹೂಗಳಿಂದ 24 ಅಡಿ ಎತ್ತರದ ರಾಕೆಟ್ ಲಾಂಚರ್, ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್ ಅನ್ನು ಹೂಗಳಿಂದಲೇ ನಿರ್ಮಿಸಲಾಗಿದೆ.
ಭಾರತ ಆತಿಥ್ಯ ವಹಿಸಿರುವ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತವನ್ನು ಬೆಂಬಲಿಸಲು ಹೂವುಗಳನ್ನು ಬಳಸಿ 'ಗೆದ್ದು ಬಾ ಇಂಡಿಯಾ' ಎಂಬ ಕಲಾಕೃತಿ ರಚಿಸಲಾಗಿದೆ. ಪ್ರವೇಶದ್ವಾರದಲ್ಲಿ ಹೂವುಗಳನ್ನು ಬಳಸಿ 20 ಅಡಿ ಎತ್ತರದ ಚಾಮುಂಡೇಶ್ವರಿ ದೇವಿಯ ವಿಗ್ರಹ ರಚಿಸಲಾಗಿದೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಕಲಾಕೃತಿಗಳನ್ನೂ ಹೂವಿನಲ್ಲಿ ನಿರ್ಮಾಣ ಮಾಡಿರುವುದನ್ನು ಇಲ್ಲಿ ನೋಡಬಹುದು.
ಇದನ್ನೂ ಓದಿ:ಆಹಾರ ದಸರಾದಲ್ಲಿ ಬುಡಕಟ್ಟು ಜನಾಂಗದ 'ಬಂಬೂ ಬಿರಿಯಾನಿ' ಘಮ