ರಸ್ತೆಯಲ್ಲಿ ವಾಗ್ವಾದ: ಯುವಕನನ್ನು ಗುದ್ದಿಕೊಂಡೇ ಕಾರ್ ಚಲಾಯಿಸಿದ ಕಿರಾತಕರು - ಯುವಕನ್ನು ಗುದ್ದಿಕೊಂಡೇ ಕಾರ್ ಚಲಾಯಿಸಿದ ಕಿರಾತಕರು
ಚಂಡೀಗಢ: ಅಪರಾಧ ಪ್ರಕರಣಗಳು ನಗರದಲ್ಲಿ ನಿರಂತರವಾಗಿ ಹೆಚ್ಚುತ್ತಿವೆ. ಸೆಕ್ಟರ್ 22 ರಲ್ಲಿ ತಡರಾತ್ರಿ ಅನಾಹುತ ಘಟನೆ ಜರುಗಿದೆ. ಕಾರಿನಲ್ಲಿ ಹೋಗುತ್ತಿದ್ದ ಯುವಕರು ರಸ್ತೆ ಬದಿ ನಿಂತಿದ್ದ ಯುವಕನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಆ ವೇಳೆ ಕಾರಿನ ಮುಂಭಾಗ ಇದ್ದ ಯುವಕನನ್ನು ಗುದ್ದಿಕೊಂಡೇ ಕಾರ್ ಚಲಾಯಿಸಿದ್ದಾರೆ. ಸ್ಥಳದಲ್ಲಿದ್ದ ಕೆಲವರು ರಕ್ಷಣೆಗೆ ಮುಂದಾದರೂ ಸಹ ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣ ಸಾಧ್ಯವಾಗಿಲ್ಲ. ಯುವಕನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಗೆ ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಿದ್ದು ಕಾರ್ ವಶಕ್ಕೆ ಪಡೆಯಲಾಗಿದೆ.
Last Updated : Feb 3, 2023, 8:23 PM IST