ಪಂಜಾಬ್: ಕಾಲುವೆಗೆ ಬಿದ್ದ ಸಿಮೆಂಟ್ ಮಿಕ್ಸರ್ ಟ್ರಕ್; ಚಾಲಕ, ಕಂಡಕ್ಟರ್ಗೆ ಗಾಯ - ಗಿಲ್ ಕಾಲುವೆಗೆ ಬಿದ್ದ ಸಿಮೆಂಟ್ ಮಿಕ್ಸರ್ ಟ್ರಕ್
Published : Oct 16, 2023, 6:16 PM IST
ಪಂಜಾಬ್ (ಲೂಧಿಯಾನ): ಸಿಮೆಂಟ್ ಮಿಕ್ಸರ್ ಟ್ರಕ್ ಕಾಲುವೆಗೆ ಬಿದ್ದ ಘಟನೆ ಕಳೆದ ರಾತ್ರಿ ಲೂಧಿಯಾನದಲ್ಲಿ ಸಂಭವಿಸಿದೆ. ಚಾಲಕ ಹಾಗೂ ಕಂಡಕ್ಟರ್ ಗಾಯಗೊಂಡಿದ್ದು, ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಟ್ರಕ್ ಮೇಲಕ್ಕೆತ್ತಲು ಸರ್ಕಾರ ಕ್ರೇನ್ ವ್ಯವಸ್ಥೆ ಮಾಡಿತ್ತು.
ಸ್ಥಳೀಯರು ಹೇಳುವ ಪ್ರಕಾರ, ಟ್ರಕ್ ಚಾಲಕ ತಪ್ಪು ದಿಕ್ಕಿನಲ್ಲಿ ಹೋಗಿದ್ದರಿಂದ ಅಪಘಾತ ಸಂಭವಿಸಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ಮಾರ್ಗ ಬದಲಿಸಿದರು. ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕಾಲುವೆಯ ಹಳಿ ಮುರಿದು ಬಿದ್ದಿದೆ. ಆದರೆ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದು ಇಲ್ಲಿ ಮೊದಲ ಅವಘಡವಲ್ಲ. ರಾಜಕಾಲುವೆಯಲ್ಲಿ ಸಣ್ಣ ಹಳಿಗಳಿಂದಾಗಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಇದುವರೆಗೆ ಈ ಕಾಲುವೆಗೆ ಹಲವು ವಾಹನಗಳು ಬಿದ್ದು ಹತ್ತಾರು ಸಾವುಗಳು ಸಂಭವಿಸಿವೆ. ಕೆಲ ದಿನಗಳ ಹಿಂದೆ ಸೌತ್ ಸಿಟಿಯಲ್ಲಿ ಕಾಲುವೆ ಕುಸಿದು ಮೂವರು ಸ್ನೇಹಿತರು ಸಾವನ್ನಪ್ಪಿದ್ದರು.
ಇದನ್ನೂ ಓದಿ:ನಿಯಂತ್ರಣ ತಪ್ಪಿ ಹೆದ್ದಾರಿ ಸೇತುವೆ ನಿರ್ಮಾಣಕ್ಕೆ ಅಗೆದಿದ್ದ ಗುಂಡಿಗೆ ಬಿದ್ದ KSRTC ಬಸ್ : ವಿಡಿಯೋ