ಕರ್ನಾಟಕ

karnataka

ETV Bharat / videos

ಬೀದಿ ನಾಯಿಗೆ ಆಹಾರ ಹಾಕುತ್ತಿದ್ದ ಯುವತಿಗೆ ಗುದ್ದಿದ ಎಸ್​ಯುವಿ: ಕಾಂಜಾವಾಲಾ ಪ್ರಕರಣ ನೆನಪಿಸಿದ ಘಟನೆ - ಯುವತಿಗೆ ಗುದ್ದಿದ ಎಸ್​ಯುವಿ

By

Published : Jan 16, 2023, 7:26 PM IST

Updated : Feb 3, 2023, 8:39 PM IST

ಚಂಡೀಗಢ(ಪಂಜಾಬ್​):ಇಲ್ಲಿ ಹಿಟ್ ಅಂಡ್ ರನ್ ಕೇಸ್​ ಒಂದು ನಡೆದಿದೆ. ರಸ್ತೆ ಬದಿಯಲ್ಲಿ ಬೀದಿ ನಾಯಿಗೆ ಆಹಾರ ಹಾಕುತ್ತಿದ್ದ 25 ವರ್ಷದ ಯುವತಿಗೆ ಥಾರ್ ಜೀಪ್ ಗುದ್ದಿದೆ. ಯುವತಿಗೆ ಎಸ್​ಯುವಿ ಗುದ್ದಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಶನಿವಾರ ನಡೆದಿದೆ. ಮಾಹಿತಿ ಪ್ರಕಾರ 25 ವರ್ಷದ ತೇಜಶ್ವಿತಾ ಮತ್ತು ಅವರ ತಾಯಿ ಎಂದಿನಂತೆ ಬೀದಿ ನಾಯಿಗಳಿಗೆ ಆಹಾರ ಹಾಕುತ್ತಿದ್ದರು. ಈ ವೇಳೆ ವೇಗವಾಗಿ ಬಂದ ವಾಹನ ಗುದ್ದಿದೆ. ಈ ವೇಳೆ ಅಲ್ಲಿದ್ದ ಯಾವುದೇ ವಾಹನಗಳು ಸಹಕಾರಕ್ಕೆ ಬರದ ಕಾರಣ ಪೊಲೀಸ್​​ ಕಂಟ್ರೋಲ್​ ರೂಮ್​ನ ಸಹಾಯ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ಚೇತರಿಸಿ ಕೊಳ್ಳುತ್ತಿದ್ದು, ದೆಹಲಿಯ ಅಂಡ್ ರನ್ ಕೇಸ್​ನ್ನು ಈ ಘಟನೆ ನೆನಪಿಸುವಂತೆ ಮಾಡಿದೆ. ಸಿಸಿಟಿವಿ ದೃಶ್ಯಾಧರಿಸಿ ದೂರು ದಾಖಲಿಸಿ ಕೊಂಡಿರುವ ಪೊಲೀಸರು ಚಾಲಕನಿಗಾಗಿ ಬಲೆ ಬೀಸಿದ್ದಾರೆ.  

ಇದನ್ನೂ ಓದಿ:ದೆಹಲಿಯಲ್ಲಿ ನಡೆದ ಹಿಟ್​ ಅಂಡ್​ ರನ್​ ಕಾಂಜಾವಾಲಾ ಪ್ರಕರಣ

Last Updated : Feb 3, 2023, 8:39 PM IST

ABOUT THE AUTHOR

...view details