ಕರ್ನಾಟಕ

karnataka

ETV Bharat / videos

ಮಿಸಲಾತಿ‌ ಕೊಡಲು ಜಾಗ ಖಾಲಿ ಇಲ್ಲ: ಸಿ ಸಿ ಪಾಟೀಲ್​ - cc patil statement on panchamsali reservation

By

Published : Aug 23, 2022, 6:18 PM IST

Updated : Feb 3, 2023, 8:27 PM IST

ಹಾವೇರಿ: ಜಿಲ್ಲೆಯಲ್ಲಿ ಪಂಚಮಸಾಲಿ 2ಎ ಮೀಸಲಾತಿ ಬಗ್ಗೆ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಪ್ರತಿಕ್ರಿಯಿಸಿ, ಮೀಸಲಾತಿ ಕೊಡಲು ಜಾಗ ಖಾಲಿ ಇಲ್ಲ. ಕಾನೂನಾತ್ಮಕ ಅಡೆತಡೆಗಳಿವೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಾಜಕ್ಕೆ ಮೀಸಲಾತಿ ಕೊಡಲು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ತರಾತುರಿಯಲ್ಲಿ ಮೀಸಲಾತಿ ಘೋಷಣೆ ಮಾಡಲು ಬರುವುದಿಲ್ಲ. ದೇಶದ ಎರಡು ರಾಜ್ಯಗಳಲ್ಲಿ ತರಾತುರಿಯಲ್ಲಿ ಮೀಸಲಾತಿ ಘೋಷಣೆ ಮಾಡಿದ್ದರ ಪರಿಸ್ಥಿತಿ ಏನಾಗಿದೆ ಅನ್ನೋದರ ಬಗ್ಗೆ ನಿಮಗೆಲ್ಲ ಗೊತ್ತಿದೆ. ಸಿಎಂ ಬೊಮ್ಮಾಯಿಯವರು ಸಮಾಜದ ಪರವಾಗಿದ್ದಾರೆ. ಸಿಎಂ‌ ಮೇಲೆ ಸಂವಿಧಾನಾತ್ಮಕ ಜವಾಬ್ದಾರಿ ಇದೆ. ಮೀಸಲಾತಿ ಕೊಡುತ್ತಾರೆ, ಹೋರಾಟ ಮಾಡೋದು ಬೇಡ ಎಂದು ಸಿ ಸಿ ಪಾಟೀಲ್​ ತಿಳಿಸಿದರು.
Last Updated : Feb 3, 2023, 8:27 PM IST

ABOUT THE AUTHOR

...view details