ಚಾಮರಾಜನಗರ: ಸಿಡಿಲು ಬಡಿತಕ್ಕೆ 8 ಹಸು, 4 ಕುರಿಗಳು ಸಾವು
ಚಾಮರಾಜನಗರ: ಸಿಡಿಲಿನ ಬಡಿತಕ್ಕೆ 8 ಹಸು, 4 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕುಂದಕೆರೆ ಗ್ರಾಮದ ರಾಜು ಹಾಗೂ ಸಣ್ಣಮಲ್ಲಪ್ಪ ಎಂಬವರಿಗೆ ಸೇರಿದ ಜಾನುವಾರುಗಳು ಇವಾಗಿವೆ. ಮೇಯಲು ಬಿಟ್ಟಿದ್ದ ವೇಳೆ ಭಾರೀ ಪ್ರಮಾಣದಲ್ಲಿ ಸುರಿದ ಸಿಡಿಲು ಸಹಿತ ಮಳೆಗೆ ಸಿಲುಕಿ ಮೃತಪಟ್ಟಿವೆ ಎಂದು ಮಾಲೀಕ ಸಣ್ಣಮಲ್ಲಪ್ಪ ನೋವು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಗ್ರಾಪಂ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ಪರಿಶೀಲಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಬಿಸಿಲಿನ ತಾಪಕ್ಕೆ ಒಣಗುತ್ತಿರುವ ಕಾಫಿ ಗಿಡಗಳು:ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ ಮೆಣಸು, ಕಾಫಿ, ಹೂ-ಹಣ್ಣಿನ ಗಿಡಗಳು ಒಣಗುತ್ತಿವೆ. ಇದರಿಂದ ಬೆಳಗಾರರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಈ ವೇಳೆಗೆ ಸಮಾನ್ಯವಾಗಿ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಮಳೆಯಾಗದೇ ಇರುವುದರಿಂದ ಭೂಮಿ ಸಂಪೂರ್ಣ ಒಣಗಿದೆ. ಹಾಗಾಗಿ ಕಾಳುಮೆಣಸು ಸೇರಿದಂತೆ ಕಾಫಿ ಗಿಡಗಳು ಚಿಗುರೊಡೆಯಲು ತೇವಾಂಶವೇ ಇಲ್ಲದಂತಾಗಿದೆ. ಹೀಗೆ ಮುಂದುವರೆದರೆ ಕಾಫಿ ತೋಟಗಳು ಬೋರಾರ್ ರೋಗಕ್ಕೆ ತುತ್ತಾಗುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಬಿಸಿಲ ತಾಪಕ್ಕೆ ಒಣಗುತ್ತಿವೆ ಕೊಡಗಿನ ಕಾಫಿ ತೋಟಗಳು: ಹೈರಾಣಾದ ಬೆಳೆಗಾರರು