ಹೋರಿ ಬೆದರಿಸುವ ಸ್ಪರ್ಧೆ.. ಕೆರೆಯ ನೀರಿಗೆ ಬಿದ್ದ ಕೊಬ್ಬರಿ ಹೋರಿ - ಕೆರೆಯ ನೀರಿಗೆ ಬಿದ್ದ ಕೊಬ್ಬರಿ ಹೋರಿ
ದನಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕೊಬ್ಬರಿ ಹೋರಿ ಕೆರೆಯ ನೀರಲ್ಲಿ ಬಿದ್ದಿರುವ ಘಟನೆ ಹಾವೇರಿ ತಾಲೂಕು ಕುಳೇನೂರು ಗ್ರಾಮದಲ್ಲಿ ನಡೆದಿದೆ. ಕುಳೇನೂರು ಗ್ರಾಮದಲ್ಲಿ ಗುರುವಾರ ದೀಪಾವಳಿ ನಿಮಿತ್ತ ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕುಳೇನೂರು ಗ್ರಾಮದ ಪ್ರಭು ಗರಾಶಿ ಎಂಬುವವರಿಗೆ ಸೇರಿದ ಎತ್ತು ಕೆರೆಯ ನೀರಿಗೆ ಬಿದ್ದಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಜನರ ಕೇಕೆ ಹಾಗೂ ಸಿಳ್ಳೆಗಳ ಶಬ್ದದಿಂದ ಹೆದರಿ ಹೋರಿ ಕೆರೆಯ ನೀರಿಗೆ ಬಿದ್ದಿದೆ. ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದ ಜನರು ಹೋರಿಯನ್ನು ಕೆರೆ ನೀರಿನಿಂದ ಮೇಲಕ್ಕೆ ತಂದಿದ್ದಾರೆ. ದಡ ಸೇರುತ್ತಿದ್ದಂತೆ ಕೊಬ್ಬರಿ ಹೋರಿ ಓಡಿ ಹೋಗಿದೆ.
Last Updated : Feb 3, 2023, 8:30 PM IST