ಕರ್ನಾಟಕ

karnataka

ಸ್ಟೀಲ್ ಮಡಿಕೆಯಲ್ಲಿ ತಲೆ ಸಿಲುಕಿಸಿಕೊಂಡಿರುವ ಬೆಕ್ಕು

ETV Bharat / videos

ಹಾಲು ಕುಡಿಯಲು ಹೋಗಿ ಬಿಂದಿಗೆಯೊಳಗೆ ಸೆರೆಯಾದ ಬೆಕ್ಕಿನ ತಲೆ: ವಿಡಿಯೋ - ವೈಶಾಲಿಯ ಲಾಲ್‌ಗಂಜ್‌ನಲ್ಲಿರುವ ಅಗರ್‌ಪುರ ಪ್ರದೇಶ

By

Published : Jun 23, 2023, 9:30 PM IST

ವೈಶಾಲಿ (ಬಿಹಾರ): ಹಾಲು ಕುಡಿಯಲು ಹೋಗಿ ಬಿಂದಿಗೆಯೊಳಗೆ ತಲೆ ಸಿಲುಕಿಕೊಂಡು ಬೆಕ್ಕೊಂದು ಗೋಳಾಡಿದ ಘಟನೆ ಬಿಹಾರದ ವೈಶಾಲಿಯಲ್ಲಿ ನಡೆದಿದೆ. ಮನೆ ಪ್ರವೇಶಿಸಿದ ತಕ್ಷಣ ಬೆಕ್ಕಿನ ಕಣ್ಣುಗಳು ಹಾಲು ತುಂಬಿದ ಬಿಂದಿಗೆ ಮೇಲೆ ಬಿದ್ದಿದೆ. ಪಾತ್ರಿಯೆ ತಳಭಾಗದಲ್ಲಿದ್ದ ಹಾಲು ಕಂಡು ಕುಡಿಯಲು ಪ್ರಯತ್ನಿಸಿದೆ. ಆಗ ತಲೆ ಸಿಲುಕಿಕೊಂಡು ಸುಮಾರು ಹೊತ್ತು ಗೋಳಾಡಿತು.  

ತಲೆಯನ್ನು ಹೊರ ತೆಗೆಯಲಾಗದೇ ಅಲ್ಲೊಮ್ಮೆ ಇಲ್ಲೊಮ್ಮೆ ಬೆಕ್ಕು ಓಡಾಡಿತು. ಕಿಟಕಿ ಮೇಲೆ, ಪರದೆಯ ಮೇಲೆ ಹೀಗೆ ಬಿಂದಿಗೆಯಿಂದ ತಪ್ಪಿಸಿಕೊಳ್ಳಲು ಅವಿರತ ಪ್ರಯತ್ನ ನಡೆಸಿತು. ಗಂಟೆಗಳ ನಂತರ ಮನೆಯವರು ಬೆಕ್ಕಿನ ಪರಿಸ್ಥಿತಿ ನೋಡಿ ಸಮೀಪದಲ್ಲಿದ್ದ ಬಿದಿರು ಕಟ್ಟಿಗೆಯನ್ನು ಬೆಕ್ಕಿನ ಮುಖಕ್ಕೆ ಎಸೆದು ಬಿಟ್ಟರು. ಇದರಿಂದ ಬೆದರಿದ ಬೆಕ್ಕು ತಕ್ಷಣ ತಲೆಯನ್ನೂ ಹೇಗೋ ಮಾಡಿ ಹೊರ ತೆಗೆಯಿತು. ಈ ಸಂದರ್ಭದಲ್ಲಿ ಅದರ ಬಾಯಿಗೆ ಗಾಯವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತರೇಹೇವಾರಿ ರೀತಿಯಲ್ಲಿ ಕಾಮೆಂಟುಗಳನ್ನು ಮಾಡುತ್ತಿದ್ದಾರೆ. 

ಇದನ್ನೂಓದಿ:ಆಷಾಢ ಶುಕ್ರವಾರ: ಚಾಮುಂಡಿ ಬೆಟ್ಟದಲ್ಲಿ ನಾಡದೇವತೆಯ ದರ್ಶನ ಪಡೆದ ನಟ ದರ್ಶನ್​- ವಿಡಿಯೋ

ABOUT THE AUTHOR

...view details