ಕುಡಿದ ಮತ್ತಿನಲ್ಲಿ ಗನ್ ಬೀಸಿದ ಆಪ್ ಅಭ್ಯರ್ಥಿ: ಪ್ರಕರಣ ದಾಖಲು - ಈಟಿವಿ ಭಾರತ ಕನ್ನಡ
ನವದೆಹಲಿ: ಕುಡಿದ ಮತ್ತಿನಲ್ಲಿ ಡ್ಯಾನ್ಸ್ ಮಾಡುವ ವೇಳೆ ಗನ್ ಬೀಸಿದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ವರೂಪ್ ನಗರದ ವಾರ್ಡ್ ಸಂಖ್ಯೆ 19ರ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜೋಗೇಂದ್ರ ಸಿಂಗ್ ಅಲಿಯಾಸ್ ಬಂಟಿ ವಿರುದ್ಧ ಸ್ವರೂಪ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೋಗೇಂದ್ರ ಸಿಂಗ್ ಕುಡಿದ ಮತ್ತಿನಲ್ಲಿ ಡ್ಯಾನ್ಸ್ ಮಾಡುವ ವೇಳೆ ತಮ್ಮಲ್ಲಿದ್ದಂತಹ ಗನ್ ಅನ್ನು ಹೊರ ತೆಗೆದು ಬೀಸಿದ್ದು, ಅಲ್ಲದೇ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿಗೂ ಗನ್ ತೋರಿಸಿದ್ದಾರೆ. ಗನ್ ಬೀಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವೈರಲ್ ಆಗಿರುವ ವಿಡಿಯೋ ಆಧಾರದ ಮೇಲೆ ಪೊಲೀಸರು ಪರಿಶೀಲನೆ ನಡೆಸಿ ಜೋಗೇಂದ್ರ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Feb 3, 2023, 8:34 PM IST