ದಾವಣಗೆರೆ: ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಕಾರು ಡಿಕ್ಕಿ, ಇಬ್ಬರು ಸಾವು- ಸಿಸಿಟಿವಿ ವಿಡಿಯೋ - ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಕಾರು ಡಿಕ್ಕಿ
Published : Dec 8, 2023, 8:03 PM IST
ದಾವಣಗೆರೆ: ರಸ್ತೆ ಬದಿಯಲ್ಲಿ ಚಲಿಸುತ್ತಿದ್ದ ಟ್ರ್ಯಾಕ್ಟರ್ಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ದಾವಣಗೆರೆ ಹೊರವಲಯದ ಶಿರಮಗೊಂಡನಹಳ್ಳಿ ಬ್ರಿಡ್ಜ್ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತುಮಕೂರು ಕಡೆಯಿಂದ ವೇಗದಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣಕ್ಕೆ ಸಿಗದೆ ಎದುರಿನಿಂದ ಚಲಿಸುತ್ತಿದ್ದ ಟ್ರ್ಯಾಕ್ಟರ್ ಹಿಂಬದಿಗೆ ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿ ಏಳು ಜನರು ಪ್ರಯಾಣಿಸುತಿದ್ದರು. ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದಿಂದ ತುಮಕೂರಿಗೆ ಮದುವೆಗೆ ತೆರಳಿ ಹೊಸರಿತ್ತಿ ಗ್ರಾಮಕ್ಕೆ ವಾಪಸಾಗುವ ವೇಳೆ ಘಟನೆ ನಡೆದಿದೆ. ಈ ಘಟನೆಯಲ್ಲಿ ತಾಯಿ ಮತ್ತು ಮಗ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮೃತರನ್ನು ಪುತ್ರ ಅರುಣ್ ಶೆಟ್ಟರ್ (50) ತಾಯಿ ವಿಜಯಲಕ್ಷ್ಮಿ ಶೆಟ್ಟರ್ (70) ಎಂದು ಗುರುತಿಸಲಾಗಿದೆ. ಅಪಘಾತದ ದೃಶ್ಯ ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ನೋಡಿ:ಡ್ರೈವರ್ ಅಜಾಗರೂಕತೆಯ ಚಾಲನೆಗೆ ಡಿವೈಡರ್ ದಾಟಿ ಬಂದ ಟ್ರಕ್ : ವಿಡಿಯೋ