ವಾಗ್ವಾದ.. ಬೈಕ್ಗೆ ಡಿಕ್ಕಿ ಹೊಡೆದು ಕಾರಿನ ಸಮೇತ ಪರಾರಿಯಾದ ಚಾಲಕ! - ನವದೆಹಲಿಯಲ್ಲಿ ಬೈಕ್ ಸವಾರಿನಿಗೆ ಡಿಕ್ಕಿ ಹೊಡೆದ ಕಾರು ಚಾಲಕ
ನವದೆಹಲಿ: ಇಲ್ಲಿನ ಅರ್ಜನ್‌ಗಢ್ ಮೆಟ್ರೋ ನಿಲ್ದಾಣದ ಬಳಿ ಬೈಕರ್ ಗುಂಪು ಮತ್ತು ಕಾರಿನ ಚಾಲಕನ ನಡುವೆ ವಾಗ್ವಾದ ನಡೆದಿದೆ. ಕೆಲಕಾಲ ನಡೆದ ವಾಗ್ವಾದದಲ್ಲಿ ಎರಡೂ ಕಡೆಯವರಿಂದ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದ್ದು, ಬಳಿಕ ಬೈಕ್ ಸವಾರರ ಗುಂಪು ಮುಂದೆ ಸಾಗಿದೆ. ಆಗ ಏಕಾಏಕಿ ಹಿಂದಿನಿಂದ ಬಂದ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕೆಳಗೆ ಬಿದ್ದು, ರೈಲಿಂಗ್‌ಗೆ ಡಿಕ್ಕಿ ಹೊಡೆದಿದ್ದಾನೆ. ಅದೃಷ್ಟವಶಾತ್ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರಿಂದಾಗಿ ಡಿಕ್ಕಿಯ ನಂತರವೂ ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ಒಂದು ವೇಳೆ ಬೈಕ್ ಸವಾರ ಹೆಲ್ಮೆಟ್ ಧರಿಸದೇ ಇದ್ದಿದ್ದರೆ ಈ ಘಟನೆ ಮಾರಣಾಂತಿಕವಾಗಿ ಪರಿಣಮಿಸುತ್ತಿತ್ತು. ಸದ್ಯ ಸಂತ್ರಸ್ತ ಯುವಕ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದ್ದಾನೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Last Updated : Feb 3, 2023, 8:23 PM IST