ಕರ್ನಾಟಕ

karnataka

ಆಳವಾದ ನಾಲೆಗೆ ಬಿದ್ದರೂ ಕಾರಿನಲ್ಲೇ ಕುಳಿತಿದ್ದ ಇಬ್ಬರು

ETV Bharat / videos

ಆಳವಾದ ನಾಲೆಗೆ ಬಿದ್ದರೂ ಕಾರಿನಲ್ಲೇ ಕುಳಿತಿದ್ದ ಇಬ್ಬರು.. ರಕ್ಷಣೆ ಮಾಡಿದ್ದೇಗೆ? ವಿಡಿಯೋ ನೋಡಿ... - ಸ್ವಿಫ್ಟ್ ಡಿಜೈರ್

By

Published : Jun 10, 2023, 7:34 PM IST

ಹರಿದ್ವಾರ (ಉತ್ತರಾಖಂಡ):ಕಾರೊಂದು ಆಳವಾದ ನಾಲೆಗೆ ಬಿದ್ದರೂ ಚಾಲಕ ಸೇರಿ ಇಬ್ಬರು ಅದರಲ್ಲೇ ಕುಳಿತಿದ್ದ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ. ಘಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರು ಮತ್ತು ಇಬ್ಬರನ್ನೂ ಹೊರತೆಗೆದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.  

ಅಜಯ್ ಸಿಂಗ್ ರಾವತ್ ಹಾಗೂ ಗಣೇಶ್ ಕುಮಾರ್ ಎಂಬುವರು ಶನಿವಾರ ಬೆಳಗಿನ ಜಾವ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಹರಿದ್ವಾರ - ಡೆಹ್ರಾಡೂನ್ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಓಂ ಸೇತುವೆ ಬಳಿ ಗಂಗಾ ನಾಲೆಗೆ ಕಾರು ನಿಯಂತ್ರಣ ತಪ್ಪಿ ಉರುಳಿದಿದೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಪೊಲೀಸರು ಪರಿಶೀಲನೆ ನಡೆಸಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಇದೇ ವೇಳೆ ನೀರಿಗೆ ಬಿದ್ದ ಕಾರಿನಲ್ಲೇ ಇಬ್ಬರೂ ಸಹ ಹಾಗೆ ಕುಳಿತಿರುವುದು ಪೊಲೀಸರು ಗಮನಿಸಿದ್ದಾರೆ. ಹೀಗಾಗಿ ಮೊದಲಿಗೆ ಇಬ್ಬರನ್ನೂ ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಳಿಕ ಕ್ರೇನ್ ಸಹಾಯದಿಂದ ಕಾರನ್ನು ಹೊರತೆಗೆದಿದ್ದಾರೆ. ಈ ಬಗ್ಗೆ ಹರಿದ್ವಾರದ ರೋಡಿ ಬೆಳವಾಲ ಹೊರ ಠಾಣೆಯ ಪೊಲೀಸ್​ ಅಧಿಕಾರಿ ಪ್ರವೀಣ್ ರಾವತ್ ಪ್ರತಿಕ್ರಿಯಿಸಿ, ಓಂ ಸೇತುವೆ ಬಳಿ ನಾಲೆಗೆ ಕಾರೊಂದು ಬಿದ್ದಿದೆ ಎಂಬ ಕಂಟ್ರೋಲ್​ ರೂಮ್​ಗೆ ಮಾಹಿತಿ ಸಿಕ್ಕಿತ್ತು. ಅಂತೆಯೇ, ಸ್ಥಳಕ್ಕಾಗಮಿಸಿ ರಕ್ಷಣೆ ಕಾರ್ಯ ಮಾಡಲಾಗಿದೆ. ಈ ಘಟನೆ ಬಗ್ಗೆ ಚಾಲಕನನ್ನು ವಿಚಾರಿಸಿದಾಗ ನಿದ್ರೆ ಮಂಪರಿನಲ್ಲಿದ್ದಾಗ ಕಾರಿನ ನಿಯಂತ್ರಣ ತಪ್ಪಿ ಬಿದ್ದಿರುವುದಾಗಿ ತಿಳಿಸಿದ್ದಾನೆ ಎಂಬುವುದಾಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಮಾಜಿ ಸಚಿವ ಶಿವಣ್ಣರ ಕಾರು ಕಳ್ಳತನ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

...view details