ಕರ್ನಾಟಕ

karnataka

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ನುಗ್ಗಿದ ಕಾರು.. ವಿಡಿಯೋ

ETV Bharat / videos

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ತಾವರೆಕೆರೆಗೆ ನುಗ್ಗಿದ ಕಾರು.. ವಿಡಿಯೋ - Car crash video

By ETV Bharat Karnataka Team

Published : Nov 18, 2023, 6:40 PM IST

ಶಿವಮೊಗ್ಗ:ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ನುಗ್ಗಿದ್ದ ಘಟನೆ ಹೊಸನಗರದ ರಿಪ್ಪನಪೇಟೆಯಲ್ಲಿ ಸಂಭವಿಸಿದೆ. ರಿಪ್ಪನಪೇಟೆ ಬಳಿಯ ತಾವರೆಕೆರೆಗೆ ಈ ಕಾರು ನುಗ್ಗಿದೆ. ಅದೃಷ್ಟವಶಾತ್ ಚಾಲಕ ಹಾಗೂ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಿಂದ ರಿಪ್ಪನಪೇಟೆ ಮಾರ್ಗವಾಗಿ ಸೊನಲೆ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ತಾವರೆಕೆರೆಯು  ರಿಪ್ಪನಪೇಟೆ- ಹೊಸನಗರ ರಸ್ತೆಯ ಪಕ್ಕದಲ್ಲಿಯೇ ಇದ್ದು, ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಕೆರೆಗೆ ಇಳಿದಿದೆ. ಘಟನೆ ಕಂಡು ರಸ್ತೆಯಲ್ಲಿ ಸಾಗುತ್ತಿದ್ದ ಇತರ ವಾಹನ ಸವಾರರು ಕಾರಿನಲ್ಲಿ ಇದ್ದವರನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ:ರಾಯಚೂರು: ರಸ್ತೆ ಕ್ರಾಸ್​ ಮಾಡುವಾಗ ಬಸ್​ಗೆ ಸಿಲುಕಿದ ಬೈಕ್​​, ಇಬ್ಬರಿಗೆ ಗಾಯ.. ಸಿಸಿಟಿವಿ ವಿಡಿಯೋ

ಮಾಹಿತಿ ತಿಳಿದು ರಿಪ್ಪನಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಕಾರು ಮೇಲಕ್ಕೆತ್ತಿದ್ದಾರೆ.  ಸ್ಥಳೀಯರ ಸಮಯಪ್ರಜ್ಞೆ ಹಾಗೂ ಕಾರು ಹೆಚ್ಚಿನ ಆಳದವರೆಗೆ ತೆರಳದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಅಲ್ಲದೇ, ಕೆರೆಯಲ್ಲಿ ನೀರು ಕಡಿಮೆ ಇದ್ದ ಕಾರಣ ವಾಹನ ಮುಳುಗಿರಲಿಲ್ಲ. ಅವಘಡದ ಬೆನ್ನಲ್ಲೇ ಕೆರೆ ಬಳಿ ಸೂಚನಾಫಲಕ ಹಾಗೂ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳೀಯರು ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ:ಕೊಡಗು: ಕಾರು - ಆಟೋ ನಡುವೆ ಭೀಕರ ಅಪಘಾತ‌.. ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

...view details