ಬೈಕ್ಗೆ ಅಡ್ಡಬಂದ ಕಾರು.. ಮೂವರು ತೂರಿ ರಸ್ತೆಗೆ ಬಿದ್ದರು.. ಸಿಸಿಟಿವಿಯ ದೃಶ್ಯ ನೋಡಿ - ಅಪಘಾತದಲ್ಲಿ ಬೈಕ್ ಜಖಂಗೊಂಡಿದೆ
ಉತ್ತರಾಖಂಡ್ ರಾಜ್ಯದ ಹಲ್ದ್ವಾನಿ ಮುಖಾನಿ ಕಮಲುವಗಂಜ ರಸ್ತೆಯಲ್ಲಿ ತಡರಾತ್ರಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಮೂವರು ಬೈಕ್ ಸವಾರರು ತೂರಿ ರಸ್ತೆಗೆ ಬಿದ್ದಿದ್ದಾರೆ. ಘಟನೆ ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಘಟನೆಯಲ್ಲಿ ಬೈಕ್ನಲ್ಲಿದ್ದ ಮೂವರು ಯುವಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಬೈಕ್ ಜಖಂಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Last Updated : Feb 3, 2023, 8:35 PM IST