ಹುಬ್ಬಳ್ಳಿಯಲ್ಲಿ ಧಗ ಧಗನೇ ಹೊತ್ತಿ ಉರಿದ ಕಾರು - ವಿಡಿಯೋ - hubballi
ಹುಬ್ಬಳ್ಳಿ:ಏಕಾಏಕಿಯಾಗಿ ಕಾರೊಂದು ಹೊತ್ತಿ ಉರಿದ ಘಟನೆ ಇಲ್ಲಿನ ವಿದ್ಯಾನಗರದ ರಿಲಯನ್ಸ್ ಮಾರ್ಟ್ ಎದುರು ನಡೆದಿದೆ. ಕಾರಿನಲ್ಲಿ ಮೊದಲು ಹೊಗೆ ಕಾಣಿಸಿಕೊಡಿದ್ದು ನಂತರ ಕಾರಿನ ತುಂಬೆಲ್ಲಾ ಆವರಿಸಿ ಕಾರು ಧಗ ಧಗ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದವರು ಕಾರು ಇಳಿದು ಹೊರ ಬಂದಿದ್ದಾರೆ. ಇದರಿಂದ ಸಂಭವಿಸಬಹುದಾದ ಭಾರಿ ದುರಂತ ತಪ್ಪಿದೆ. ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನು, ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ.
Last Updated : Feb 3, 2023, 8:39 PM IST