ಕಾರನ್ನು ಟೋಯಿಂಗ್ ಮಾಡಿ ತರುತ್ತಿದ್ದ ವೇಳೆ ಡಿಸೇಲ್ ಲೀಕ್.. ಬೆಂಕಿಗೆ ಆಹುತಿಯಾದ ಕಾರು - ಬೆಂಕಿಗೆ ಭಸ್ಮವಾದ ವಾಹನ
ರಾಮನಗರ: ಬಿಡದಿ ಬಳಿ ಅಪಘಾತವಾಗಿದ್ದ ಕಾರನ್ನು ಮೈಸೂರಿಗೆ ಟೋಯಿಂಗ್ ಮಾಡಿಕೊಂಡು ತರಲಾಗುತ್ತಿತ್ತು. ಈ ವೇಳೆ ಡೀಸೆಲ್ ಲೀಕ್ ಆದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ತಗುಲಿದ್ದು, ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ. ವಿಷಯ ತಿಳಿದ ಕೂಡಲೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated : Feb 3, 2023, 8:28 PM IST