ವಿದ್ಯುತ್ ತಂತಿ ತಗುಲಿ ಹೊತ್ತಿ ಉರಿದ ಕ್ಯಾಂಟರ್: ಚಾಲಕ, ಕ್ಲೀನರ್ ಬಚಾವ್.. - etv bharat kannada
Published : Dec 6, 2023, 10:11 AM IST
ನೆಲಮಂಗಲ: ರಾಗಿಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ಗೆ ರಸ್ತೆಯಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿದ ಪರಿಣಾಮ ರಾಗಿಹಲ್ಲು ಮತ್ತು ಕ್ಯಾಂಟರ್ ಹೊತ್ತಿ ಉರಿದಿರುವ ಘಟನೆ ನೆಲಮಂಗಲ ತಾಲೂಕಿನ ಇಮಚೇನಹಳ್ಳಿ ಬಳಿ ನಡೆದಿದೆ. ಸುರೇಶ್ ಎಂಬುವರು ಕ್ಯಾಂಟರ್ನಲ್ಲಿ ರಾಗಿಹುಲ್ಲು ತುಂಬಿಕೊಂಡು ಬರುವಾಗ ಘಟನೆ ಸಂಭವಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಮತ್ತು ಕ್ಲಿನರ್ ಕ್ಯಾಂಟರ್ ಬಿಟ್ಟು ಹೊರ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಬೆಂಕಿ ಅವಘಡದಿಂದ ಸುಮಾರು 3 ಲಕ್ಷ ರೂ ಮೌಲ್ಯದಷ್ಟು ನಷ್ಟ ಸಂಭವಿಸಿದೆ. ದಾಬಸ್ ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೆಲ ದಿನಗಳ ಹಿಂದೆ ಹುಬ್ಬಳಿಯಲ್ಲೂ ಇಂತಹದ್ದೇ ಘಟನೆ ಸಂಭವಿಸಿತ್ತು. ವಿದ್ಯುತ್ ತಂತಿ ಸ್ಪರ್ಶಿಸಿ ಕ್ಯಾಂಟರ್ ವಾಹನವೊಂದು ಸುಟ್ಟು ಕರಕಲಾಗಿತ್ತು. ಗಾಮನಗಟ್ಟಿ ಬಸ್ ನಿಲ್ದಾಣದ ಬಳಿ ತೆರಳುತ್ತಿದ್ದ ವೇಳೆ ಕ್ಯಾಂಟರ್ಗೆ ವಿದ್ಯುತ್ ತಂತಿ ಸ್ಪರ್ಶಿಸಿ ನೋಡ ನೋಡುತ್ತಿದ್ದಂತೆ ವಾಹನ ಹೊತ್ತಿ ಉರಿಯಲಾರಂಭಿಸಿತ್ತು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಕ್ಯಾಂಟರ್ನಿಂದ ಕೆಳಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದ.
ಇದನ್ನೂ ಓದಿ:ಧಾರವಾಡ: ಆಟ ಆಡುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಕಾಪಾಡಲು ಹೋದ ಗೆಳೆಯನಿಗೆ ಗಾಯ