ಅಭ್ಯರ್ಥಿಗಳ ಪರ ಅಖಾಡಕ್ಕಿಳಿದ ಕುಟುಂಬಸ್ಥರು: ಸೋಮಣ್ಣ ಪರ ಪತ್ನಿ ಭರ್ಜರಿ ಪ್ರಚಾರ.. - karnataka election 2023
ಚಾಮರಾಜನಗರ: ಸಚಿವ ಸೋಮಣ್ಣ ಸ್ಪರ್ಧೆ ಬಳಿಕ ಹೈವೋಲ್ಟೆಜ್ ಕ್ಷೇತ್ರವಾಗಿ ಬದಲಾಗಿರುವ ಚಾಮರಾಜನಗರದಲ್ಲಿ ಅಭ್ಯರ್ಥಿಗಳ ಪರ ಕುಟುಂಬಸ್ಥರು ಅಖಾಡಕ್ಕಿಳಿದು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಸಚಿವ ಸೋಮಣ್ಣ ಪತ್ನಿ ಶೈಲಜಾ ಸೋಮಣ್ಣ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಮಹಿಳಾ ಸಂಘಗಳು, ಮುಖಂಡರ ಮನೆಗೆ ಭೇಟಿ ಕೊಟ್ಟು ಸೋಮಣ್ಣ ಪರ ಮತಯಾಚನೆ ಮಾಡುತ್ತಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಪುತ್ರಿಯರಾದ ಶೀಲಾ ಮತ್ತು ವೇದಾ, ಹಳ್ಳಿಗಳಿಗೆ ಭೇಟಿ ಕೊಟ್ಟು ಮನೆ-ಮನೆಗೂ ತೆರಳಿ ತಂದೆಯ ಪರವಾಗಿ ಮತಯಾಚನೆ ನಡೆಸುತ್ತಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಸೋಮಣ್ಣ ವರುಣದಲ್ಲಿ ಪ್ರಚಾರ ನಡೆಸುತ್ತಿದ್ದರೆ. ಇತ್ತ ಅವರ ಅನುಪಸ್ಥಿತಿಯಲ್ಲಿ ಪತ್ನಿ ಶೈಲಜಾ ಚಾಮರಾಜನಗರದಲ್ಲಿ ಬಿರುಸಿನ ಪ್ರಚಾರ ಕೈಗೊಂಡು ಪತಿಯನ್ನು ಕ್ಷೇತ್ರದಲ್ಲಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ಪರ ಪತ್ನಿ ವಿದ್ಯಾ ಮತ್ತು ಬಿಜೆಪಿ ಅಭ್ಯರ್ಥಿ ನಿರಂಜನ ಕುಮಾರ್ ಪರ ಪತ್ನಿ ಸವಿತಾ, ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಪರ ಶ್ರೀವರ್ಧನ್, ಹನೂರಲ್ಲಿ ಕೈ ಅಭ್ಯರ್ಥಿ ನರೇಂದ್ರ ಪರ ಮಗ ನವನೀತ್ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಪತಿಗೆ ಪತ್ನಿಯೇ ಸ್ಟಾರ್ ಪ್ರಚಾರಕಿ: ಚುನಾವಣಾ ಅಖಾಡ ರಂಗೇರಿಸಿದ ಮಹಿಳಾಮಣಿಯರು