ಕಾಂಬೋಡಿಯಾದ ಕಲಾವಿದರಿಂದ 'ಅಹಿರಾವಣ ಪ್ರಸಂಗ'- ವಿಡಿಯೋ ನೋಡಿ - ರಾಯಗಢದ ರಾಮ್ ಲೀಲಾ ಮೈದಾನ
ಛತ್ತೀಸ್‌ಗಢ: ರಾಯಗಢದ ರಾಮ್ ಲೀಲಾ ಮೈದಾನದಲ್ಲಿ ರಾಷ್ಟ್ರೀಯ ರಾಮಾಯಣ ಉತ್ಸವ ಸೋಮವಾರದಿಂದ ಆರಂಭವಾಗಿದೆ. ಮೊದಲ ದಿನ ಛತ್ತೀಸ್‌ಗಢದಿಂದ 4,500 ಕಿ.ಮೀ ದೂರದಲ್ಲಿರುವ ಕಾಂಬೋಡಿಯಾದ 12 ಕಲಾವಿದರ ಅಂತಾರಾಷ್ಟ್ರೀಯ ರಾಮಾಯಣ ತಂಡವು ಮನಮೋಹಕ ಪ್ರಸ್ತುತಿ ನೀಡಿತು. ವಿಶೇಷ ಪರಿಣತಿಯ ಕಲಾವಿದರು 25 ನಿಮಿಷಗಳ ಪ್ರದರ್ಶನದಲ್ಲಿ ತಮ್ಮ ಅತ್ಯಾಕರ್ಷಕ ವೇಷಭೂಷಣಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಿದರು. ಈ ಉತ್ಸವದಲ್ಲಿ ವಿದೇಶಿ ರಾಮಾಯಣ ತಂಡವು ಅಹಿರಾವಣ ಪ್ರಸಂಗ ಪ್ರಸ್ತುತಪಡಿಸಿತು.
ಪ್ರಸಂಗದಲ್ಲಿ, ರಾವಣನ ಸಹೋದರ ಅಹಿರಾವಣನು ರಾಮನನ್ನು ಪ್ರಜ್ಞಾಹೀನನನ್ನಾಗಿ ಮಾಡುವ ಮೂಲಕ ಪಾತಾಳ ಲೋಕಕ್ಕೆ ಕರೆದೊಯ್ಯುತ್ತಾನೆ. ಹನುಮಂತನು ರಾಮನನ್ನು ಸುರಕ್ಷಿತವಾಗಿ ಕರೆತರಲು ಪಾತಾಳ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಹನುಮಂತನಿಗೆ ಅವನ ಮಗ ಮಕರಧ್ವಜ ಎದುರಾಗುತ್ತಾನೆ. ಇಬ್ಬರ ನಡುವೆ ಕಾದಾಟ ನಡೆಯುತ್ತದೆ. ಆದರೆ ಇದರಲ್ಲಿ ಯಾರಿಗೂ ಜಯ ಅಥವಾ ಅಪಜಯ ಉಂಟಾಗುವುದಿಲ್ಲ. ಕೊನೆಯಲ್ಲಿ, ಹನುಮಂತ ಶ್ರೀರಾಮನನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಾನೆ. ಕಾಂಬೋಡಿಯಾದ ಕಲಾವಿದರು ಈ ಕಾರ್ಯಕ್ರಮವನ್ನು ಅತ್ಯಂತ ಭಾವನಾತ್ಮಕ ರೀತಿಯಲ್ಲಿ ಪ್ರದರ್ಶಿಸಿ ಪ್ರೇಕ್ಷಕರಿಂದ ಮೆಚ್ಚುಗೆಯ ಕರತಾಡನ ಪಡೆದರು.
ಇದನ್ನೂ ಓದಿ:ತೆಲಂಗಾಣ ಸಂಸ್ಥಾಪನಾ ದಿನ: ಗೋಲ್ಕೊಂಡ ಕೋಟೆಯಲ್ಲಿ ಕೇಂದ್ರ ಸಚಿವರಿಂದ ಧ್ವಜಾರೋಹಣ