ಕರ್ನಾಟಕ

karnataka

ETV Bharat / videos

ದಿನಪತ್ರಿಕೆ ಓದುತ್ತಲೇ ಕುಸಿದುಬಿದ್ದು ಉದ್ಯಮಿ ಸಾವು: ವಿಡಿಯೋ - businessman died

By

Published : Nov 7, 2022, 1:16 PM IST

Updated : Feb 3, 2023, 8:31 PM IST

ಬಾರ್ಮರ್: ಉದ್ಯಮಿಯೊಬ್ಬರು ದಿನಪತ್ರಿಕೆ ಓದುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಉದ್ಯಮಿ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಮೃತ ಉದ್ಯಮಿಯನ್ನು ಜಿಲ್ಲೆಯ ಪಚ್ಚಪದ್ರ ನಿವಾಸಿ ದಿಲೀಪ್ ಕುಮಾರ್ (61) ಎಂದು ಗುರುತಿಸಲಾಗಿದೆ. ಸೂರತ್‌ನಲ್ಲಿ ಅವರು ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಮೃತರು ನವೆಂಬರ್ 4 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತಮ್ಮ ಗ್ರಾಮಕ್ಕೆ ಆಗಮಿಸಿದ್ದರು. ನವೆಂಬರ್ 5 ರಂದು ಹಲ್ಲುನೋವಿನ ಕಾರಣ ಅವರು ಬಲೋತ್ರದ ನಯಾಪುರದಲ್ಲಿರುವ ಕ್ಲಿನಿಕ್‌ಗೆ ತಪಾಸಣೆಗೆಂದು ಬಂದಿದ್ದರು. ಅಲ್ಲಿ ಅವರು ದಿನಪತ್ರಿಕೆ ಓದುತ್ತಲೇ, ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Last Updated : Feb 3, 2023, 8:31 PM IST

ABOUT THE AUTHOR

...view details