ಕರ್ನಾಟಕ

karnataka

ಅಪಘಾತವೆಸಗಿರುವ ಬಸ್​

ETV Bharat / videos

Watch: ನಿಂತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದ ಸಾರಿಗೆ ಬಸ್​.. ಓರ್ವ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ: ವಿಡಿಯೋ - ಇರುಮುಡಿ ಮೂರ್ತಿ

By

Published : Aug 18, 2023, 10:22 AM IST

ಹಾಸನ: ರಸ್ತೆ ಬದಿ ನಿಂತಿದ್ದ ರಿಕ್ಷಾಗೆ ವೇಗವಾಗಿ ಬಂದ ಸಾರಿಗೆ ಬಸ್​ ಡಿಕ್ಕಿ ಹೊಡೆದು ಓರ್ವ ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಇರುಮುಡಿ ಮೂರ್ತಿ (54) ಎಂಬ ವ್ಯಕ್ತಿ ಸಾವನ್ನಪ್ಪಿದ್ದು, ರಿಕ್ಷಾ ಚಾಲಕ ಮತ್ತು ಮತ್ತೋರ್ವ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಚಿಂತಾಜನಕವಾಗಿದೆ.  ಹಾಸನ - ಬೆಂಗಳೂರು ನಾನ್ ಸ್ಟಾಪ್ ಬಸ್ ಬೆಂಗಳೂರಿಂದ ಹಾಸನಕ್ಕೆ ಬರುತ್ತಿತ್ತು. ಈ ವೇಳೆ, ಹಾಸನದಲ್ಲಿ ರಸ್ತೆ ಬದಿ ನಿಲ್ಲಿಸಿದ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ರಿಕ್ಷಾ 3 ಸುತ್ತು ಸುತ್ತಿ ಕೆಳಕ್ಕುರುಳಿದೆ. 

ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿ, ಚಾಲಕ ಆನಂದ್​ ಮತ್ತು ಪ್ರಯಾಣಿಕ ಬೆಟ್ಟೇಗೌಡ ಗಂಭೀರ ಗಾಯಗೊಂಡರು. ಘಟನೆಗೆ ಮುಂದೆ ಹೋಗುತ್ತಿದ್ದ ಮತ್ತೊಂದು ಸಾರಿಗೆ ಬಸ್​ ಅನ್ನು ಓವರ್​ ಟೇಕ್​ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸಾರಿಗೆ ಬಸ್​ ಚಾಲಕನನ್ನು ವಶಕ್ಕೆ ಪಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:Double Murder: ಇಬ್ಬರು ವೃದ್ಧ ವ್ಯಕ್ತಿಗಳನ್ನು ಹೊಡೆದು ಕೊಂದ ಮಾನಸಿಕ ಅಸ್ವಸ್ಥ; ಹೆದ್ದಾರಿಯಲ್ಲಿ ಶವ ಎಳೆದೊಯ್ದು ಕ್ರೌರ್ಯ!

ABOUT THE AUTHOR

...view details