ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಬಸ್: ವಿಡಿಯೋ - ಅಮರಾವತಿ ರಾಷ್ಟ್ರೀಯ ಹೆದ್ದಾರಿ
ನಾಗ್ಪುರ (ಮಹಾರಾಷ್ಟ್ರ): ಅಮರಾವತಿ ಹೆದ್ದಾರಿಯಲ್ಲಿ ಶಿವಶಾಹಿ ಎಂಬ ಹೆಸರಿನ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿದೆ. ನಾಗಪುರ-ಅಮರಾವತಿ ರಾಷ್ಟ್ರೀಯ ಹೆದ್ದಾರಿಯ ಕೊಂಧಳಿಯ ಸಾಯಿಬಾಬಾ ಮಂದಿರದ ಸಮೀಪ ಇಂದು ಬೆಳಗ್ಗೆ ಘಟನೆ ನಡೆಯಿತು. ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬಸ್‌ನಲ್ಲಿ 16 ಮಂದಿ ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಎಲ್ಲ ಪ್ರಯಾಣಿಕರು, ಚಾಲಕ, ಕಂಡಕ್ಟರ್ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವು ಪ್ರಯಾಣಿಕರ ಸಾಮಗ್ರಿ ಸುಟ್ಟು ಕರಕಲಾಗಿದೆ ಎಂಬ ಮಾಹಿತಿ ಇದೆ.
MH-06-BW-0788 ಸಂಖ್ಯೆಯ ಬಸ್ ಗಣೇಶ್ಪೇಟ್ದಿಂದ ಅಮರಾವತಿ ಕಡೆಗೆ ಸಂಚರಿಸುತ್ತಿತ್ತು. ಬಸ್ ಕೊಂಧಳಿ ಹತ್ತಿರ ಬರುತ್ತಿದ್ದಂತೆ ಇಂಜಿನ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಅಬ್ದುಲ್ ಜಹೀರ್ ಶೇಖ್ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿ, ಕಂಡಕ್ಟರ್ ಉಜ್ವಲಾ ದೇಶಪಾಂಡೆ ಸಹಾಯದಿಂದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಈ ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದ್ದರು. ದುರ್ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.
ಇದನ್ನೂ ಓದಿ:ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ.. ನಡು ರಸ್ತೆಯಲ್ಲಿ ಹೊತ್ತಿ ಉರಿದ ವಾಹನ